Site icon PowerTV

ಓಮೈಕ್ರಾನ್​ ಪ್ರಕರಣ ಹೆಚ್ಚಳ ಹಿನ್ನೆಲೆ : ಗಡಿ ಜಿಲ್ಲೆಯಲ್ಲಿ ಹೈ ಅಲರ್ಟ್

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ದಿನದಿನಕ್ಕೂ ಹೆಚ್ಚಾಗುತ್ತಾ ಇದೆ. ಹೀಗಾಗಿ ಬೆಳಗಾವಿ-ಗೋವಾ ಗಡಿಯಲ್ಲೂ ಫುಲ್​ ಅಲರ್ಟ್​ ಘೋಷಿಸಲಾಗಿದೆ. ಕಣಕುಂಬಿ ಬಳಿ ಖಾನಾಪುರ ಪೊಲೀಸರ ಸರ್ಪಗಾವಲನ್ನ ಹಾಕಿದ್ದು, ಪೊಲೀಸರು ಗೋವಾದಿಂದ ಬೆಳಗಾವಿಗೆ ಬರುವ ಎಲ್ಲಾ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು ತಪಾಸಣೆ ನಡೆಸುತ್ತಿದ್ದಾರೆ.

ಗೋವಾದಿಂದ ಬೆಳಗಾವಿಗೆ ಬರುವ ಪ್ರಯಾಣಿಕರು ಮತ್ತು ಚಾಲಕರು ಎರಡು ಡೋಸ್ ವಾಕ್ಸಿನ್ ಸರ್ಟಿಫಿಕೇಟ್ ಅನ್ನು ಕಡ್ಡಾಯವಾಗಿ ತರಬೇಕಾಗಿದೆ. ಒಂದು ವೇಳೆ ರೋಗ ಲಕ್ಷಣಗಳಿದ್ದರೆ ಮತ್ತು ವ್ಯಾಕ್ಸಿನ್ ಹಾಕಿಸಕೊಳ್ಳದೆ ಇದ್ರೆ ಅಂತವರಿಗೆ RT-PCR ನೆಗೆಟಿವ್​ ರಿಪೋರ್ಟ್​​ ಕಡ್ಡಾಯವಾಗಿದೆ, ವಾಕ್ಸಿನ್ ಸರ್ಟಿಫಿಕೇಟ್ ಅಥವಾ RT-PCR ನೆಗೆಟಿವ್ ರಿಪೋರ್ಟ್ ಇಲ್ಲದ ಪ್ರಯಾಣಿಕರಿಗೆ ಬೆಳಗಾವಿಗೆ ಎಂಟ್ರಿ ಕೊಡುವಂತಿಲ್ಲ.

ಪ್ರಯಾಣಿಕರ ಬಳಿ RT-PCR ನೆಗೆಟಿವ್ ರಿಪೋರ್ಟ್​ ಇಲ್ಲದಕ್ಕೆ ಮಹಾರಾಷ್ಟ್ರದಿಂದ ಬರುತ್ತಿದ್ದ ಬಸ್ಸನ್ನ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಈ ಬಸ್​ ಪುಣೆಯಿಂದ ಬೆಳಗಾವಿಗೆ ಬರುತ್ತಿದ್ದ ಖಾಸಗಿ ಬಸ್ ಆಗಿದ್ದು ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್​ಪೋಸ್ಟ್​​ನ ತಪಾಸಣೆ ವೇಳೆ ಪ್ರಯಾಣ ಮಾಡುತ್ತಿದ್ದ ಯಾರ ಬಳಿಯೂ ಕೋವಿಡ್​ ಸರ್ಟಿಫಿಕೇಟ್ ಇಲ್ಲದ ಕಾರಣ ಆ ಬಸ್ಸ್​​ನ್ನು ವಾಪಸ್​ ಕಳುಹಿಸಲಾಗಿದೆ.

Exit mobile version