Site icon PowerTV

ಬೆಂಗಳೂರು ಕೆಂಪು ಪಟ್ಟಿ ವಲಯಕ್ಕೆ ಸೇರ್ಪಡೆಯಾಗುತ್ತಾ..?

ಬೆಂಗಳೂರು :  ಕೊರೋನಾ ಹಾಗೂ ಒಮೈಕ್ರಾನ್​ ಕೇಸುಗಳು ದಿನದಿಂದ ದಿನಕ್ಕೆ ಏರುತ್ತಿವೆ. ದೇಶದಲ್ಲಿ ನಿನ್ನೆಯಿಂದ ಇವತ್ತಿಗೆ ಒಂದೇ ದಿನ 33,750 ಕೇಸುಗಳು ದಾಖಲಾಗಿವೆ. ಕರ್ನಾಟಕದಲ್ಲಿ 1,187 ಕೇಸುಗಳು ವರದಿಯಾಗಿದೆ.

ಇದರಲ್ಲಿ ರಾಜಧಾನಿಯ ಪಾಲು 923 ಇದ್ದು, ಈ ಆತಂತಕಾರಿ ಅಂಕಿಅಂಶಗಳ ನಡುವೆ ಲಾಕ್​​ಡೌನ್​ ಮತ್ತೆ ಹೇರಬೇಕೇ ಎನ್ನುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿವೆ. ಲಾಕ್​​ಡೌನ್​ ಜಾರಿಗೆ ತರುವುದು ಅಥವಾ ಬಿಡುವುದು ಸಾರ್ವಜನಿಕರ ಕೈಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ, ಮತ್ತೆ ಲಾಕ್​ಡೌನ್​ ಗುಮ್ಮ ಕಾಡಲಾರಂಭಿಸಿದೆ.

ರಾಜ್ಯದ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 76ಕ್ಕೆ ಏರಿದೆ.ಹಾಗಾಗಿ, ಕೇಂದ್ರ ಆರೋಗ್ಯ ಇಲಾಖೆ ಬೆಂಗಳೂರು ನಗರವನ್ನು ಕೆಂಪು ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ. ಒಂದು ವೇಳೆ ಹಾಗಾದಲ್ಲಿ ಹೋದ ವರ್ಷದ ಮೇ, ಜೂನ್ ತಿಂಗಳಲ್ಲಿ ಇದ್ದಂತೆ ನಿರ್ಬಂಧ ಜಾರಿಯಾಗುವ ಸಾಧ್ಯತೆಯಿದೆ.

Exit mobile version