Site icon PowerTV

ದೆಹಲಿಯಲ್ಲಿ ಹೆಚ್ಚಿದ ಕೋವಿಡ್ ಮತ್ತು ಒಮೈಕ್ರಾನ್

ಇತ್ತೀಚಿಗೆ ಜಿನೋಮ್ ಸೀಕ್ವೆನ್ಸಿಂಗ್​​ಗೆ ಕಳುಹಿಸಲಾದ ಕೋವಿಡ್-19 ಮಾದರಿಗಳಲ್ಲಿ ಶೇಕಡಾ 84ರಷ್ಟು ಮಂದಿಯಲ್ಲಿಒಮೈಕ್ರಾನ್ ಪತ್ತೆಯಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾಹಿತಿ ನೀಡಿದ್ದಾರೆ. ಹೊಸ ಕೊವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದರೂ, ಹೆಚ್ಚಿನ ಜನರಲ್ಲಿ ಗಂಭೀರ ಸ್ವರೂಪದ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ದೆಹಲಿ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಡಿಸೆಂಬರ್ 30-31 ರಂದು ಜೀನೋಮ್ ಸೀಕ್ವೆನ್ಸಿಂಗ್​​​ಗೆ ಟೆಸ್ಟ್​​​​​ಗೆ ಕಳುಹಿಸಲಾದ ವರದಿಗಳ ಪ್ರಕಾರ, ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಮತ್ತು ಪಿಲಿಯರಿ ಸೈನ್ಸಸ್, ಲೋಕನಾಯಕ್ ಆಸ್ಪತ್ರೆ ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಶೇ. 84 ಮಾದರಿಗಳಲ್ಲಿ ಓಮೈಕ್ರಾನ್‌ ಪತ್ತೆಯಾಗಿವೆ. ಇಂದು ಬಿಡುಗಡೆಯಾದ ಹೆಲ್ತ್​​​​ ಬುಲೆಟಿನ್ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 4,000 ಹೊಸ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ.

Exit mobile version