Site icon PowerTV

ಆತ್ಮಹತ್ಯೆ ಮಾಡ್ಕೊಳ್ಳೋಕೆ ಅವ್ನು ಮಲಗಿದ್ದು ರೈಲ್ವೆ ಹಳಿಮೇಲೆ..

ಮುಂಬೈ: ಮುಂಬೈ ಶಿವಾಜಿ ರೈಲ್ವೆ ಸ್ಟೇಷನ್ನಿನಲ್ಲಿ ಹಳಿಯ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ಕೂದಲೆಳೆಯಷ್ಟರಲ್ಲಿ ಬದುಕುಳಿದ ಘಟನೆ ನಡೆದಿದೆ. ಭಾರತೀಯ ರೈಲ್ವೆ ಇಲಾಖೆ ಸಿಸಿಟಿವಿಯಲ್ಲಿ ದಾಖಲಾದ ಈ ವಿಡಿಯೋ ಫುಟೇಜನ್ನು ಟ್ವಿಟ್ ಮಾಡಿದ ಕೆಲವೇ ಸಮಯದಲ್ಲಿ ಇದು ಸಖತ್ ವೈರಲ್ ಆಗಿದೆ.

ವ್ಯಕ್ತಿಯೊಬ್ಬ ಶಿವಾಜಿ ಸ್ಟೇಷನ್ನಿನ ಬಳಿ ರೈಲ್ವೆ ಹಳಿಯ ಬಳಿ ಕಾದಿದ್ದು, ರೈಲು ಬರುತ್ತಿದ್ದಂತೆಯೇ ಹಳಿಯ ಮೇಲೆ ಮಲಗಿದ್ದಾನೆ. ಕೇವಲ 30ರಿಂದ 40 ಮೀಟರುಗಳಷ್ಟು ದೂರದಲ್ಲಿ ಬರುತ್ತಿದ್ದ ರೈಲು ಚಾಲಕ ಸಮಯಪ್ರಜ್ಷೆಯಿಂದ ಎಮರ್ಜೆನ್ಸಿ ಬ್ರೇಕ್ ಹಾಕಿದ್ದರಿಂದ ರೈಲು ನಿಂತು ಆಗಂತುಕ ಬದುಕಿಕೊಂಡಿದ್ದಾನೆ. ತಕ್ಷಣ ಅಲ್ಲಿಗೆ ಧಾವಿಸಿದ ರೈಲ್ವೆ ಪೊಲೀಸರು ವ್ಯಕ್ತಿಯನ್ನು ಹಳಿಯಿಂದ ಎಬ್ಬಿಸಿ ಬದುಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

Exit mobile version