Site icon PowerTV

ಶಾಸಕ ಪ್ರೀತಂ ಗೌಡ ಫೋಟೋಗೆ ಹಾನಿ

ಹಾಸನ : ಕಲ್ಲಿನಿಂದ ಹೊಡೆದು ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಭಾವಚಿತ್ರಕ್ಕೆ ಹಾನಿ ಮಾಡಿರುವ ಕೃತ್ಯ ಹಾಸನ ನಗರದ ಎಂ.ಜಿ.ರಸ್ತೆಯಲ್ಲಿ ನಡೆದಿದೆ.

ಹಾಸನದ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಿಡಿಗೇಡಿಗಳು ಶಾಸಕ ಪ್ರೀತಂಗೌಡ ಭಾವಚಿತ್ರಕ್ಕೆ ಹಾನಿ ಮಾಡಿ ಎಸ್ಕೇಪ್ ಆಗಿದ್ದಾರೆ. ಹಾಸನ ನಗರದಲ್ಲಿ ಉದ್ಘಾಟನೆಗೆ ಸಿದ್ದವಾಗಿದ್ದ ಎಂಜಿ ರಸ್ತೆಯ ಫುಡ್ ಕೋರ್ಟ್ ನಲ್ಲಿ ಅಳವಡಿಸಲಾಗಿದ್ದ ಬೋರ್ಡ್​ಗೆ ಹಾನಿ ಮಾಡಿರುವ ಕಿಡಿಗೇಡಿಗಳು, ಅದರಲ್ಲಿದ್ದ ಶಾಸಕ ಪ್ರೀತಂಗೌಡ ಭಾವಚಿತ್ರವನ್ನು ಒಡೆದು ಹಾಕಿದ್ದಾರೆ.

ನಿನ್ನೆ ರಾತ್ರಿ ಕಿಡಿಗೇಡಿಗಳು ಶಾಸಕರ ಭಾವಚಿತ್ರ ಹಾನಿಗೊಳಿಸಿದ್ದು, ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸುಮಾರು ನೂರು ಮೀಟರ್ ಉದ್ದಕ್ಕೆ ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ನಗರದ ವಿವಿಧೆಡೆ ಬೀದಿ ಬದಿಯಲ್ಲಿ ಅಹಾರ ಪದಾರ್ಥ ಮಾರಾಟ ಮಾಡೋ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈಗಾಗಲೇ ನಗರದ ಸಾಲಗಾಮೆ ರಸ್ತೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಒಳಗೊಂಡ ಅತ್ಯಾಧುನಿಕ ಫುಡ್ ಕೋರ್ಟ್ ನಿರ್ಮಾಣ ಅಗಿದೆ.

Exit mobile version