Site icon PowerTV

ಕೇಸರಿ ಶಾಲು VS ಸ್ಕಾರ್ಫ್

ಚಿಕ್ಕಮಗಳೂರು : ಮುಸ್ಲಿಂ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಕಾಲೇಜಿಗೆ ಬರುವುದನ್ನು ವಿರೋಧಿಸಿ ಕೊಪ್ಪ ತಾಲೂಕಿನ ಬಾಳಗಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದ ಘಟನೆ ಇಂದು ಕಾಲೇಜಿನಲ್ಲಿ ನಡೆದಿದೆ.

ಮೂರು ವರ್ಷಗಳ ಹಿಂದೆಯೂ ಸ್ಕಾರ್ಫ್ ವಿವಾದವಾಗಿತ್ತು ಆಗ ಪೋಷಕರು ಪ್ರಾಂಶುಪಾಲರು ವಿವಾದವನ್ನು ತಿಳಿಗೊಳಿಸಿದ್ದರು ಇದೀಗ ಮತ್ತೆ ಇದೇ ವಿವಾದ ಹುಟ್ಟಿಕೊಂಡಿದೆ ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ಖಂಡಿಸಿ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದಿದ್ದಾರೆ.

ಸಚಿನ್ ಶೆಟ್ಟಿ ಚಿಕ್ಕಮಗಳೂರು.

Exit mobile version