Site icon PowerTV

ತವರಿನಲ್ಲಿ ಮತ್ತೆ ಭಾವುಕರಾದ : ಸಿಎಂ

ಧಾರವಾಡ : ನಾನು ನಿಮ್ಮವನು , ನಿಮ್ಮೂರಿನ ಹುಡುಗ. ತವರಿಗೆ ಹೂವು ತರುವೆ ಹೊರತು ಹುಲ್ಲು ತರಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾವುಕ ಭಾಷಣ ಮಾಡಿದ ಅವರು ನಿಮ್ಮೆಲ್ಲರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ. ಅದೇ ರೀತಿ ಪಕ್ಷದ ಶಾಸಕರು,ಸಚಿವರು ಸಂಫೂರ್ಣ ಸಹಕಾರ ಕೊಡುತ್ತಿದ್ದಾರೆ,ನನ್ನ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಪ್ರತೀ ದಿನ 10 ರಿಂದ 15 ಗಂಟೆ ಕೆಲಸ ಮಾಡುತ್ತಿದ್ದೇನೆ ಎಂದರು.

ಹುಬ್ಬಳ್ಳಿ ಧಾರವಾಡ ಸಮಗ್ರ ಅಭಿವೃದ್ಧಿ ಆಗಬೇಕಿದೆ, ಬಜೆಟ್​ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುವುದು, ಬೆಳಗಾವಿ-ಧಾರವಾಡ- ಹುಬ್ಬಳ್ಳಿ ಚೆನ್ನೈ ಕಾರಿಡಾರ್​ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

Exit mobile version