Site icon PowerTV

ಮಕ್ಕಳು ಕೋವಿಡ್ ಲಸಿಕೆ ಪಡೆದುಕೊಳ್ಳಲಿ ಯಾವುದೇ ಭಯ ಬೇಡ : ಬಿ.ಸಿ ಪಾಟೀಲ್

ಹಾವೇರಿ : ನೀವು ಮಕ್ಕಳು ಕೋವಿಡ್ ಲಸಿಕೆ ಪಡೆದುಕೊಳ್ಳಿ, ಯಾವುದೇ ಭಯ ಇಲ್ಲ ಎಂದು ೧೫-೧೮ ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ಭಾರತದಲ್ಲಿ ಬಹಳಷ್ಟು ಜನರನ್ನು ಕೊರೋನಾದಿಂದ ಆತಂಕಗೊಂಡಿದೆ, ಕೋವಿಡ್ ವ್ಯಾಕ್ಸೀನ್ ಕಂಡು ಹಿಡಿದ ದೇಶ ನಮ್ಮದು ,ಇದನ್ನು ಹೇಳಲು ಹೆಮ್ಮೆ ಆಗುತ್ತದೆ, ಹಾಗೆನೇ ಎರಡನೇ ಅಲೆ ಸಂದರ್ಭದಲ್ಲಿ ಏನೂ ಆಗಲ್ಲ ಅಂತ ನಾವು ಮೈಮರೆತಿದ್ದೆವು, ಆದರೆ ಜನರು ಜ್ವರ ಬಂದಿದೆ ಹೋಗುತ್ತೆ ಅನ್ನೋ ನಿರ್ಲಕ್ಷ್ಯದಿಂದ ತುಂಬಾ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 650 ಜನ ಪ್ರಾಣ ಕಳೆದುಕೊಂಡಿದ್ದಾರೆ, ಒಂದು ಕಡೆ ಆರ್ಥಿಕ ಹೊಡೆತ, ಪ್ರಾಣ ಕಳೆದುಕೊಳ್ಳೋರು ಒಂದು ಕಡೆ , ಬಹಳ ತೊಂದರೆ ಅನುಭವಿಸಬೇಕಾಯ್ತು ಈಗ ಎಲ್ಲರಿಗೂ ವ್ಯಾಕ್ಸೀನ್ ನೀಡಿದ್ದಾರೆ. ಹಾವೇರಿಯಲ್ಲಿ 77677 ಮಕ್ಕಳಿಗೆ ವ್ಯಾಕ್ಸೀನ್ ನೀಡಲಾಗುತ್ತದೆ.

ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ವ್ಯಾಕ್ಸೀನ್ ಕೊಡಬೇಕಿದೆ, ಅದೇರೀತಿ ಓಮಿಕ್ರಾನ್ ಬಹಳ ಬೇಗ ಹರಡುತ್ತದೆ ಅನ್ನುವ ವದಂತಿ ಇದೆ, ಈಗಾಗಲೇ ಸರ್ಕಾರ ಮೂರನೇ ಅಲೆಯನ್ನು ಎದುರಿಸಲು ಸಿದ್ಧರಾಗಿದ್ದಾರೆ, ಮೊದಲು ಆಕ್ಸಿಜನ್ ಕೊರತೆ ಕಾಡುತಿತ್ತು, ಆದರೆ ಈಗ ಜಿಲ್ಲೆಯಲ್ಲಿ ಯಾವುದೇ ಕೊರತೆ ಇಲ್ಲ. ಎಲ್ಲಾ ವ್ಯವಸ್ಥೆಗಳು ಇದೆ, ವ್ಯಾಕ್ಸೀನ್ ಹಾಕಿಕೊಂಡ ಬಳಿಕವೂ ಕೋವಿಡ್ ಮಾರ್ಗ ಸೂಚಿ‌ಯನ್ನು ಪಾಲಿಸಬೇಕಿದೆ, ಲಸಿಕೆ ಪಡೆದಿರುವವರಿಗೆ ಏನೂ ಆಗಿಲ್ಲ ಎಂದು ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

Exit mobile version