Site icon PowerTV

ಡೂಪ್ಲಿಕೇಟ್ ನಂಬರ್ ಪ್ಲೇಟ್; ವಿಕ್ಕಿ ಕೌಶಲ್ ವಿರುದ್ಧ ದೂರು

ಇಂದೋರ್: ವಿಕ್ಕಿ ಕೌಶಲ್ ಎಂಬ ಬಾಲಿವುಡ್ ನಟನ ವಿರುದ್ಧ ಸಾರ್ವಜನಿಕರೊಬ್ಬರು ದೂರು ದಾಖಲಿಸಿದ್ದಾರೆ. ಏನಪ್ಪ ಸಿನಿಮಾ ನಟನ ವಿರುದ್ಧ ದೂರು ದಾಖಲಿಸುವಂಥದ್ದು ಅವರೇನು ಮಾಡಿದ್ರು ಅಂತೀರ? ಪಾಪ ವಿಕ್ಕಿ ಕೌಶಲ್ ಒಂದು ಬೈಕ್ ಓಡಿಸಿದ್ದಾನೆ. ಅವನ ಹಿಂದೆ ಸಾರಾಅಲಿ ಖಾನ್ ಸಹ ಕುಳಿತಿದ್ದಾರೆ. ಇದರಲ್ಲೇನು ತಪ್ಪು ಅಂತ ಕೇಳ್ತೀರ? ತಪ್ಪು ಇವರು ಬೈಕ್ ಓಡಿಸಿದ್ದಲ್ಲ, ಬೈಕ್ ಮೇಲಿರುವ ನಂಬರ್ ಪ್ಲೇಟ್ ಇನ್ನೊಬ್ಬರ ವಾಹನದ್ದು ಎಂಬುದೇ ಇಲ್ಲಿರುವ ತಪ್ಪು.

ಸಿನಿಮಾ ಸಿಕ್ವೆಲ್ ಲುಕಾ ಚುಪ್ಪಿ ಚಿತ್ರೀಕರಣಕ್ಕಾಗಿ ವಿಕ್ಕಿ ಕೌಶಲ್ ಓಡಿಸಿದ ಬೈಕ್​ನ ನಂಬರ್ ಪ್ಲೇಟ್ ಬಳಸಿರುವುದು ನನ್ನ ಬೈಕ್​ನ ನಂಬರ್. ಇದನ್ನು ಅವರು ಬಳಸಿರುವುದು ಅಪರಾಧ ಎಂದು ಜೈಸಿಂಗ್ ಯಾದವ್ ಎಂಬ ದೂರುದಾರ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ಬಗಂಗಾ ಪ್ರದೇಶದ ಸಬ್​ಇನ್ಸ್​ಪೆಕ್ಟರ್ ರಾಜೇಂದ್ರ ಸೋನಿ ಈ ಸಂಬಂಧ ನಮಗೆ ದೂರು ಬಂದಿದೆ. ಅಕ್ರಮವಾಗಿ ನಂಬರ್ ಪ್ಲೇಟ್ ಬಳಸಲಾಗಿದೆಯೇ ಎಂಬುದರ ಬಗ್ಗೆ ನಾವು ಪರಿಶೀಲಿಸುತ್ತೇವೆ. ಮೋಟಾರು ವಾಹನ ಕಾಯ್ದೆ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Exit mobile version