ನಿಷೇಧಾಜ್ಞೆ ಉಲ್ಲಂಘಿಸಿ ಪಾರ್ಟಿ : ರಾಮನಗರ ರೆಸಾರ್ಟ್​ ಮೇಲೆ ಪೊಲೀಸರ ದಾಳಿ

ರಾಮನಗರ : ನಿಷೇಧಾಜ್ಞೆ ಉಲ್ಲಂಘಿಸಿ ಅನಧಿಕೃತವಾಗಿ ಪಾರ್ಟಿ ನಡೆಸುತ್ತಿದ್ದ ರೆಸಾರ್ಟ್ ಮೇಲೆ ಶುಕ್ರವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ರಾಮನಗರದ ಕಣ್ವ ಜಲಾಶಯ ಬಳಿಯ ನೂತನವಾಗಿ ನಿರ್ಮಿಸಲಾಗಿರುವ ಟ್ರೀಕ್ಯೂಟ್ರಾ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದಾರೆ.

ರಾಮನಗರ ಎಸ್ ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ನಿಷೇಧಾಜ್ಞೆ ಇದ್ದರೂ ಲೆಕ್ಕಿಸದೇ ಪಾರ್ಟಿ ಆಯೋಜನೆ ಮಾಡಲಾಗಿತ್ತು ಸಾವಿರಾರು ಜನರು ಪಾಲ್ಗೊಂಡಿದ್ದರು. ಬೆಂಗಳೂರು,ಮತ್ತಿತ್ತರ ಕಡೆಯಿಂದ ಜನರು ಪಾರ್ಟಿಗೆ ಬಂದಿದ್ದರು. ಅದರಲ್ಲೂ ಯುವಕ,ಯುವತಿಯರು ಅತೀ ಹೆಚ್ಚು ಸಂಖ್ಯೆಯಲ್ಲಿ ಮೋಜುಮಸ್ತಿ ಮಾಡುತ್ತಿದ್ದರು, ಎಂದು ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ರೆಸಾರ್ಟ್ ಮೇಲೆ ದಾಳಿ ನಡೆಸಲಾಗಿದೆ.

ರೆಸಾರ್ಟ್ ಮಾಲೀಕ ಹಾಗು ಆತನ ಸಹಾಯಕ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ. ಎಂದು ಎಸ್ ಪಿ ಗಿರೀಶ್ ತಿಳಿಸಿದ್ದಾರೆ. ಎಪಿಡೆಮಿಕ್ ಕಾಯ್ದೆಯಡಿ ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಹಿದೆ.ರಾಮನಗರ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಜನವರಿ 2ರ ತನಕ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು.

RELATED ARTICLES

Related Articles

TRENDING ARTICLES