Site icon PowerTV

ಮಧ್ಯವಯಸ್ಕ ಮಹಿಳೆಯರನ್ನು ನಮೊ ಹೆಚ್ಚು ಆಕರ್ಷಿಸುತ್ತಾರೆ!?

ಭೋಪಾಲ್: 40-50 ವಯೋಮಾನದ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಆದರೆ ಜೀನ್ಸ್ ಮತ್ತು ಮೊಬೈಲ್ ಫೋನ್ ಹೊಂದಿರುವ ಹುಡುಗಿಯರು ಈ ರೀತಿ ಪ್ರಭಾವಿತರಾಗುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

ಜನ್ ಜಾಗರಣ ಶಿಬಿರದಲ್ಲಿ ಭೋಪಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವಾಗ ಸಿಂಗ್ ಈ ಹೇಳಿಕೆ ನೀಡಿದ್ದಾರೆ. “ಪ್ರಿಯಾಂಕಾ ಗಾಂಧಿ ವಾದ್ರಾ  ಹೀಗೊಂದು ಆಸಕ್ತಿಕರ ಸಂಗತಿ ಹೇಳಿದರು. 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರಧಾನಿ ಮೋದಿಯವರಿಂದ ಸ್ವಲ್ಪ ಹೆಚ್ಚು ಪ್ರಭಾವಿತರಾಗುತ್ತಾರೆ, ಆದರೆ ಜೀನ್ಸ್ ಧರಿಸುವ ಮತ್ತು ಮೊಬೈಲ್ ಇಟ್ಟುಕೊಂಡ ಹುಡುಗಿಯರು ಮೋದಿಯವರ ಪ್ರಭಾವಕ್ಕೊಳಗಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್  ಹೇಳುತ್ತಿರುವುದು ವಿಡಿಯೊದಲ್ಲಿದೆ. ಬಿಜೆಪಿ ಈ ಹೇಳಿಕೆಯನ್ನು ವಯಸ್ಸಿನ ಬಗ್ಗೆ ಪೂರ್ವಗ್ರಹ ಎಂದು ಟೀಕಿಸಿದೆ.

Exit mobile version