Site icon PowerTV

ಅಂಬೇಡ್ಕರ್ ಮೇಲಾಣೆ! ನಾ ಎಂದೂ ಲಂಚ ಪಡೆದಿಲ್ಲ!!

ಕೆ.ಆರ್​.ನಗರ: ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ಮಾತನ್ನು ಇಂದಿನ ಕಲಿಯುಗದಲ್ಲಿ ಸಾ.ರಾ.ಮಹೇಶ್ ಎಂಬ ಶಾಸಕರು ಹೇಳಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ! “ಮಹಾನ್‌ ಮಾನವತವಾದಿ ಡಾ.ಬಿ.ಆರ್‌.ಅಂಬೇಡ್ಕರ್‌ ಮೇಲಾಣೆ, ನನ್ನ ತಂದೆ ತಾಯಿಯಾಣೆ, ನನ್ನ ಮನೆ ದೇವರಾಣೆಯಾಗಿ ಸುದೀರ್ಘ ಶಾಸಕ ಅವಧಿಯಲ್ಲಿ ಒಂದೇ ಒಂದು ನಯಾಪೈಸೆ ಲಂಚ ಪಡೆದಿಲ್ಲ. ರಾಜಕಾರಣಕ್ಕಾಗಿ ನನ್ನ ಆಸ್ತಿಯನ್ನು ಕಳೆದುಕೊಂಡಿದ್ದೇನೆ, ರಾಜಕೀಯ ಬಿಡಲು ತಯಾರಿದ್ದೇನೆ, ರಾಜಕಾರಣದಿಂದ ಬೇಸತ್ತಿದ್ದೇನೆ” ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದ್ದಾರೆ.

“ನನ್ನ ತಂದೆ ಒಬ್ಬ ಉಪನ್ಯಾಸಕ. 1989ರಲ್ಲಿ ನಾನು 95 ಸಾವಿರ ರೂ.ಗಳಿಗೆ ಖರೀದಿಸಿದ ಒಂದು ಎಕರೆ ಭೂಮಿ ಪ್ರಸ್ತುತ 10 ಕೋಟಿ ರೂ.ಬೆಲೆ ಬಾಳುತ್ತಿದೆ. ನಾನು ಸಂಪಾದಿಸಿದ ಆಸ್ತಿಯಿಂದ ಬಂದ ಆದಾಯದಲ್ಲಿ ಜನಸೇವೆ ಮಾಡುತ್ತಿದ್ದೇನೆ. ಯಾವುದೇ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಇಲ್ಲವೆ ಜನರಾಗಲಿ ನನಗೆ ಒಂದೇ ಒಂದು ರೂ. ಲಂಚ ಕೊಟ್ಟಿದ್ದೇನೆ ಎಂದು ಸಾಬೀತು ಮಾಡಿದರೆ ಅಂದೇ ಸಾರ್ವಜನಿಕ ಜೀವನಕ್ಕೆ ಗುಡ್‌ಬೈ ಹೇಳುತ್ತೇನೆ. ದಯಮಾಡಿ ನನ್ನನ್ನು ಅರ್ಥ ಮಾಡಿಕೊಳ್ಳಿ” ಎಂದು ಭಾವುಕರಾಗಿ ನುಡಿದಿದ್ದಾರೆ.

Exit mobile version