Site icon PowerTV

ವಿಜಯಪುರವನ್ನು ಮಾದರಿಯಾಗಿಸುತ್ತೇನೆ : ಯತ್ನಾಳ್

ವಿಜಯಪುರ : ಜಿಲ್ಲಾಡಳಿತ ಸಂಕೀರ್ಣಕ್ಕೆ ಬಿಎಸ್​ವೈ ಭೂಮಿ ಪೂಜೆ ಮಾಡಲು ಬರಬೇಕಿತ್ತು, ಆದ್ರೆ ಕೊನೆ ಕ್ಷಣದಲ್ಲಿ ಅದು ಕ್ಯಾನ್ಸಲ್ ಆಗಿತ್ತು ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿದ್ದಾರೆ.

ಈ ಕಾರ್ಯ ಬೊಮ್ಮಾಯಿ ಅಮೃತ ಹಸ್ತದಿಂದ ಆಗಬೇಕು ಎಂದಿತ್ತು, ಹಾಗಾಗಿ ಅದು ಈಗ ಆಯ್ತು. ಬೊಮ್ಮಾಯಿ ಸಿಎಂ ಆಗಿ ಬಂದ ಮೇಲೆ ಉಸಿರಾಡಲು ಕಷ್ಟ ಆಗಿತ್ತು. ಐಸಿಯುನಿಂದ ಜನರಲ್ ವಾರ್ಡ್​ಗೆ ಬಂದಿದೆ. ಇನ್ಮುಂದೆ ಕೆಲಸಗಳು ವೇಗವಾಗಿ ಆಗಲಿವೆ. ವಿಜಯಪುರಕ್ಕೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರು ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ.

ನನಗೆ ಅಭಿವೃದ್ಧಿಗೆ ಎಷ್ಟುಬೇಕು ಅಷ್ಟು ಹಣ ಕೊಡ್ರಿ, ನಾನು ಏನೂ ಕೇಳೋದಿಲ್ಲ ಎಂದು ಹೇಳಿದ್ದೇನೆ. ಎಷ್ಟು ಹಣ ತಿಂದು, ದುಬೈನಲ್ಲಿ ಮನೆ ಮಾಡಿ, ರೆಸಾರ್ಟ್ ಮಾಡಿ ಏನು ಮಾಡೋದಿದೆ. ಎಷ್ಟು ಇದ್ರೆ ಏನು? ಕರೋನಾ ಬಂದ್ರೆ ಹೆಣ ಕೂಡ ಎತ್ತಿ ಬಿಸಾಕ್ತಾರೆ. ನಾನು ಎಲ್ಲರಿಗೂ ಬೈದು ಬೈದು ಚುನಾಯಿತನಾಗಿದ್ದೇನೆ. ನಾನು ವಿಜಯಪುರವನ್ನು ಮಾದರಿಯಾಗಿಸುತ್ತೇನೆ ಎಂದ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿದ್ದಾರೆ.

Exit mobile version