Site icon PowerTV

ಪಕ್ಷದ ಮುಖಂಡರ ಏಳಿಗೆಯನ್ನ ಕುಮಾರಸ್ವಾಮಿ ಸಹಿಸುವುದಿಲ್ಲ : ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ

ರಾಮನಗರ : ಜೆಡಿಎಸ್ ಗೆ ಮುಂದಿನ ದಿನಗಳಲ್ಲಿ ಬಿಗ್ ಶಾಕ್ ಕಾದಿದೆ, ಎಂದು ಜೆಡಿಎಸ್ ವಿರುದ್ದ ಹೊಸ ಬಾಂಬ್ ಸಿಡಿಸಿದ ಮಾಗಡಿಯ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಇಂದು ಬಿಡದಿಯಲ್ಲಿ ಹೇಳಿಕೆ ನೀಡಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷವು ಹೀಗಾಗಲೇ ನೆಲೆ ಇಲ್ಲದಂತಾಗಿದೆ. ಅಲ್ಲದೇ ಹಲವು ಶಾಸಕರು, ಮಾಜಿ ಶಾಸಕರು ಜೆಡಿಎಸ್ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ.ಈಗಾಗಲೇ ಜೆಡಿಎಸ್​ನ ಕೋನರೆಡ್ಡಿ, ಶ್ರೀನಿವಾಸ್ ಗೌಡ, ಗುಬ್ಬಿ ವಾಸು, ಬೆಮೆಲ್ ಕಾಂತರಾಜು ಸೇರಿದಂತೆ ಅನೇಕರು ಪಕ್ಷ ಬಿಟ್ಟಿದ್ದಾರೆ.ಮುಂದಿನ ದಿನಗಳಲ್ಲಿ ಶಾಸಕರಾದ ಪುಟ್ಟರಾಜು, ಶಿವಲಿಂಗೇಗೌಡ ಸೇರಿದಂತೆ ಹಲವು ಶಾಸಕರು ಪಕ್ಷ ಬಿಡುವ ಮಾಹಿತಿ ಇದೆ.

ಪಕ್ಷದ ಮುಖಂಡರ ಏಳಿಗೆಯನ್ನ ಮಾಜಿ ಕುಮಾರಸ್ವಾಮಿ ಅವರು ಸಹಿಸುವುದಿಲ್ಲ. ಈಗಾಗಲೇ ಉಪಚುನಾವಣೆ, ಎಂಎಲ್​ಸಿ ಚುನಾವಣೆಯಲ್ಲಿ ಜೆಡಿಎಸ್ ನೆಲಕಚ್ಚಿದೆ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಅವರು ಚುಚ್ಚುತ್ತಾರೆ ನಾನೂ ಕೂಡ ಅವರಿಂದ ಚುಚ್ಚಿಸಿಕೊಂಡಿದ್ದೇನೆಂದು ಬಿಡದಿಯಲ್ಲಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ್ದಾರೆ

Exit mobile version