Site icon PowerTV

ಚಂದ್ರಾ ಲೆಔಟ್ ನಲ್ಲಿ ಲಾಂಗ್ ಪುಂಡಾಟಿಕೆ

ಬೆಂಗಳೂರು: ಚಂದ್ರಾ ಲೆಔಟ್ ನಲ್ಲಿ ಲಾಂಗ್ ಹಿಡಿದು ಪುಂಡಾಟಿಕೆ ನಡೆಸಿದ ಪ್ರಕರಣ ನಡೆದಿದೆ. ಈ  ಸಂಬಂಧ 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನರಸಿಂಹಮೂರ್ತಿ, ಹರೀಶ್, ಸಂದೀಪ್, ಕುಮಾರ್, ಮದು, ಬಾಲಜಿ, ಶರತ್ಸಾ ಮತ್ತು ಸಾಗರ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಹಳೇ ವೈಶಮ್ಯ ಹಿನ್ನಲೆ‌ಯಲ್ಲಿ  ಎರಡು ಗುಂಪುಗಳ‌ ನಡುವೆ ಗಲಾಟೆ ನಡೆದಿತ್ತು. ಹರೀಶ್ ಪರವಾಗಿ ಲಾಂಗ್ ಹಿಡಿದು ಬಂದಿದ್ದ ನರಸಿಂಹಮೂರ್ತಿ ಲಾಂಗ್ ಹಿಡಿದು  ಶರತ್​ಗೆ ಬೆದರಿಕೆ ಹಾಕಿದ್ದರು. ಡಿಸೆಂಬರ್ 18ರಂದು   ಚಂದ್ರಲೇಔಟ್ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ.  ಚಂದ್ರಾಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Exit mobile version