Site icon PowerTV

ಕಳ್ಳನಾದ ಪೊಲೀಸಪ್ಪ!

ಬೆಂಗಳೂರು: ಅಪ್ರಾಪ್ತರನ್ನು ಬಳಸಿಕೊಂಡು ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದ ಪೊಲೀಸ್​​ ಕಾನ್‍ಸ್ಟೇಬಲ್‍ನನ್ನು, ಅದೇ ಇಲಾಖೆಯ ಪೊಲೀಸರೇ ಬಂಧಿಸಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆದಿದೆ. ಇದು ಬೇಲಿಯೆ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯನ್ನು ನೆನಪಿಸುವಂತಹ ಸ್ಟೋರಿ.

ಪೊಲೀಸ್ ಕಾನ್‍ಸ್ಟೇಬಲ್ ಹೊನ್ನಪ್ಪ ಅಲಿಯಾಸ್​​ ರವಿ ಬಂಧಿತ ಆರೋಪಿ. ಈತ ಅಪ್ರಾಪ್ತರನ್ನು ಬಳಸಿಕೊಂಡು ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದ. ಈವರೆಗೂ ಹೊನ್ನಪ್ಪ ರವಿ ಮಾರಾಟ ಮಾಡಿದ್ದ 53 ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೊನ್ನಪ್ಪ, ರಾಜಸ್ಥಾನದ ರಮೇಶ್, ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

Exit mobile version