Site icon PowerTV

ಮಾಜಿ ಸಿಎಂ ಫುಲ್ ಆ್ಯಕ್ಟಿವ್‌

ಬೆಳಗಾವಿ : ಪರಿಷತ್ ಚುನಾವಣಾ ಪ್ರಚಾರದಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಬಿಎಸ್‌ವೈ ಇದೀಗ ಚಳಿಗಾಲದ ಅಧಿವೇಶನದಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಯಡಿಯೂರಪ್ಪ ಒಂಬತ್ತು ದಿನಗಳ ಕಾಲ ಕಲಾಪದಲ್ಲಿ ಸತತವಾಗಿ ಹಾಜರಾಗುವ ಮೂಲಕ ಗಮನಸೆಳೆದಿರುವ ಬಿಎಸ್‌ವೈ.

ಅಷ್ಟೇ ಅಲ್ಲದೇ ಕಲಾಪದಲ್ಲಿ ಭಾಗಿಯಾಗಿರುವ ಮಾಜಿ ಸಿಎಂ ಕೆಲವೊಮ್ಮೆ ಸಭಾಧ್ಯಕ್ಷರಿಗೆ ಸಲಹೆ ನೀಡಿದರೆ, ಮಗದೊಮ್ಮೆ ತಮ್ಮದೇ ಪಕ್ಷದ ಸರ್ಕಾರದ ಕಿವಿ ಹಿಂಡಿರುವ ರಾಜಾಹುಲಿ ವಿಪಕ್ಷ ನಾಯಕರನ್ನೂ ತರಾಟೆಗೆ ತೆಗೆದುಕೊಂಡರು. ಸರ್ಕಾರದ ಬೆನ್ನಿಗೆ ನಿಲ್ಲುವ ಪ್ರಯತ್ನವನ್ನೂ ಮಾಡಿರುವ ಬಿಎಸ್‌ವೈ ಅದರಲ್ಲೂ ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮಾಜಿ ಸಿಎಂ ಕಾಯ್ದೆ ಮಂಡನೆ, ಕಾಯ್ದೆ ಮೇಲಿನ ಚರ್ಚೆ, ಅಂಗೀಕಾರದ ವೇಳೆ ಎಲ್ಲೂ ಅಲುಗಾಡದೆ ಸದನದಲ್ಲೇ ಹಾಜರಿದ್ದ ಬಿಎಸ್‌ವೈ ಕಾಯ್ದೆ ಸಂಬಂಧ ವಿಪಕ್ಷ ನಾಯಕರಿಗೆ ಹಿಗ್ಗಾಮುಗ್ಗಾವಾಗಿ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್‌ವೈ ಸದನದ ಒಳಗೆ, ಹೊರಗೆ ಕೈ ವಿರುದ್ಧ ಮುಗಿಬಿದ್ದಿದ್ದ ಯಡಿಯೂರಪ್ಪ ನಡೆ ಬಗ್ಗೆ ಸ್ವತಃ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ, ಹಾಗೂ ಕಲಾಪದಲ್ಲಿ ಇಷ್ಟು ಸಕ್ರಿಯವಾಗಿ ಹಾಜರಾಗಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮೂಲಕ ಬಿಎಸ್‌ವೈ ಅವರ ಬಗ್ಗೆ ಗುಣಗಾನ ಮಾಡಿದ್ದಾರೆ.

Exit mobile version