Site icon PowerTV

ಸಿಎಂಗೆ ಕಾಡುತ್ತಿರುವ ಕಾಲಿನ ಸಮಸ್ಯೆ…

ಬೆಂಗಳೂರು: ಜನವರಿ ಮೊದಲ ವಾರದಲ್ಲಿ   ಮುಖ್ಯಮಂತ್ರಿ ಬಸವರಾಜ್  ಬೊಮ್ಮಯಿರವರು  ಮುಂಬೈಗೆ ತೆರಳಲಿದ್ದಾರೆ.ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಸವರಾಜ್  ಬೊಮ್ಮಯಿರವರು ಚಿಕಿತ್ಸೆಯನ್ನು ಪಡೆಯಲಿದ್ದಾರೆ.  ಹೆಚ್ಚಿನ ಚಿಕಿತ್ಸೆಗಾಗಿ ವಿದೇಶದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ತೆರಳಲಿದ್ದಾರೆ. ಆದರೆ ಸಿಎಂ ಆಸ್ಪತ್ರೆಗೆ ತೆರಳುವ ವಿಚಾರ ಮಾತ್ರ ನಿಗೂಢವಾಗಿಯೇ ಇರಿಸಲಾಗಿದೆ.

ಬೇರೆಲ್ಲ ವಿಷಯಗಳನ್ನು ಘಂಟಾಘೋಷವಾಗಿ ಹೇಳುವ ಬಿಜೆಪಿಗರು ಸಿಎಂ ಕಾಲಿನ ಚಿಕಿತ್ಸೆಯ ವಿಷಯವಾಗಿ ಅಷ್ಟೊಂದು ಗುಟ್ಟು ಮಾಡುತ್ತಿರುವುದು ಏಕೆ ಎಂಬುದು ಮಾತ್ರ ಅರ್ಥವಾಗದ ವಿಚಾರ. ಬೊಮ್ಮಾಯಿ ಸಿಎಂ ಕುರ್ಚಿಯಿಂದ ಇಳಿಯುವ ಗಾಳಿಸುದ್ದಿಗೂ, ಈ ವಿದೇಶಿ ಚಿಕಿತ್ಸೆಗೂ ಏನಾದರೂ ಸಂಬಂದವಿದೆಯ ಎಂಬುದೇ ಈಗ ಎಲ್ಲರ ಮುಂದಿರುವ ಪ್ರಶ್ನೆ!

Exit mobile version