Site icon PowerTV

ನಕಲಿ ಮಾರ್ಕ್ಸ್​ಕಾರ್ಡ್​ ಬಳಸಿ ವಿದೇಶ ಪ್ರಯಾಣಕ್ಕೆ ಯತ್ನ

ಬೆಂಗಳೂರು: ಲಂಡನ್​ಗೆ ತೆರಳಲು ಯುವಕನೊಬ್ಬ ನಕಲಿ ಮಾರ್ಕ್ಸ್ ಕಾರ್ಡ್​ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವಕ   ನಕಲಿ ದಾಖಲಾತಿಗಳನ್ನ ನೀಡಿ ವಿದೇಶಕ್ಕೆ ತೆರಳಲು ಯತ್ನಿಸಿದ್ದಾನೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಹೇಳಿಕೆ ನೀಡಿದ್ದಾರೆ.

ಈ ಯುವಕನ ವಿರುದ್ಧ ಕೆಐಎಎಲ್ ಇಮಿಗ್ರೇಷನ್ ಅಥಾರಿಟಿಯ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಲಂಡನ್‌ಗೆ ತೆರಳಲು ಯತ್ನಿಸಿದ ಈ ಯುವಕನನ್ನ ವಶಕ್ಕೆ ಪಡೆಯಲಾಗಿದೆ ಹಾಗೂ ಆತನ‌ ಮಾಹಿತಿ ಮೇರೆಗೆ ನಕಲಿ ಮಾರ್ಕ್ಸ್ ಕಾರ್ಡ್ ನೀಡಿದ್ದವನನ್ನ ಸಹ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನಿಗೆ ನಕಲಿ ಮಾರ್ಕ್ಸ್ ಕಾರ್ಡನ್ನು True Way Global Education ಹೆಸರಿನ ಇನ್ಸ್ಟಿಟ್ಯೂಟ್ ಮಾರ್ಕ್ಸ್ ನೀಡಿದೆಯೆನ್ನಲಾಗಿದೆ. ಒನ್ ಟೈಮ್ ಸಿಟ್ಟಿಂಗ್ ನಲ್ಲಿ ವ್ಯವಹಾರ ಮುಗಿಸುವುದಾಗಿ ಆರೋಪಿಗಳು ಹೇಳ್ತಿದ್ರು. ಇವರು ಬೇಕಾದವರಿಂದ ಹಣ ಪಡೆದು, ಅವರ ಮಾಹಿತಿ‌ ಪಡೆದು ಬೇಕಾದ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದರು. ಮಾರ್ಕ್ಸ್ ಕಾರ್ಡ್ ಹಾಲೋಗ್ರಾಮ್ ಸಹ ಅಸಲಿ ಹಾಲೋಗ್ರಾಮ್ ಹೋಲುವಂತಿದೆ. ಇವರ ಒಂದು ದೊಡ್ಡ ನೆಟ್‌ವರ್ಕ್ ಇದೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಕೇರಳಕ್ಕೆ ಒಂದು ತಂಡವನ್ನ ಕಳಿಸಲಾಗಿದೆ.

Exit mobile version