Site icon PowerTV

ಸದನದಲ್ಲಿ ಗದ್ದಲದ ನಡುವೆ ಮತಾಂತರ ನಿಷೇಧ ಮಸೂದೆ ಪಾಸ್

ಬೆಳಗಾವಿ: ಕಡೆಗೂ ಬಿಜೆಪಿ ಸರ್ಕಾರ ಗೆಲುವಿನ ನಗೆ ಬೀರಿದೆ. ಮತಾಂತರ ನಿಷೇಧ ಕಾನೂನು ಸದನದಲ್ಲಿ ತೀವ್ರ ಗಲಾಟೆಗೆ ಕಾರಣವಾಗುತ್ತದೆ ಎಂಬುದು ತಿಳಿದಿದ್ದರೂ ಅದನ್ನು ಮಂಡಿಸಿ, ಕಡೆಗೂ ಅದನ್ನು ಅಂಗೀಕಾರ ಮಾಡುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ.

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಬೆಳಗಾವಿ ಸುವರ್ಣಸೌಧದಲ್ಲಿ ಅಂಗೀಕಾರವಾಗಿದೆ. ಸದನದಲ್ಲಿ ಭಾರಿ ವಿರೋಧ, ಗದ್ದಲ ಗಲಾಟೆ ಮಧ್ಯೆ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತಾಂತರ ನಿಷೇಧ ಮಸೂದೆಯನ್ನ ಧ್ವನಿ ಮತಕ್ಕೆ ಹಾಕಿದರು . ಈ ವೇಳೆ ವಿಧಾನಸಭೆಯಲ್ಲಿನ ಹೆಚ್ಚಿನ ಸದಸ್ಯರು ಮಸೂದೆ ಪರವಾಗಿ ಮತ ಹಾಕಿದ್ದು  ಈ ಮೂಲಕ ಮಸೂದೆ ಅಂಗೀಕಾರವಾಗಿದೆ.

ಪ್ರಗತಿ, ಪವರ್ ಟಿವಿ

Exit mobile version