Site icon PowerTV

ಶೀರಾಮಸೇನೆಯಿಂದ ಟಾಸ್ಕ್​​ ಪೋರ್ಸ್ : ಪ್ರಮೋದ ಮುತಾಲಿಕ್

ಹುಬ್ಬಳ್ಳಿ : ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರೋದು ಸ್ವಾಗತಾರ್ಹ. ಈ‌ ಕಾಯ್ದೆಯ ಯಶಸ್ಸಿಗಾಗಿ ಶ್ರೀರಾಮ ಸೇನೆಯಿಂದ ಟಾಸ್ಕ್ ಪೋರ್ಸ್ ತಂಡ ರಚನೆ ಮಾಡಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಮಸೂದೆ ಯಶಸ್ಸಿಗೆ ಹತ್ತು ಜನರು ಈ ತಂಡದಲ್ಲಿರುತ್ತಾರೆ.ಗೋಹತ್ಯೆ ನಿಷೇಧ ಕಾಯ್ದೆ ಬಂದರು , ಗೋಹತ್ಯೆ ನಡೆಯುತ್ತಿದೆ.ಈ ಕಾಯ್ದೆಯೂ ಕೂಡ ಕಾಯ್ದೆಗಳು ಪೇಪರ್ ನಲ್ಲಿ ಮಾತ್ರ ಉಳಿಯಬಾರದು.ಇದೆ ಕಾರಣಕ್ಕೆ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿ, ಮತಾಂತರ ತಡೆಯಲು ಪೊಲೀಸರಿಗೆ ಅನುಕೂಲವಾಗುವಂತೆ ಈ ತಂಡ ರಚನೆ ಮಾಡುತ್ತೇವೆ. ಕಾನೂನನನ್ನು ಕೈಗೆತ್ತಿಕೊಳ್ಳದೆ ಈ ತಂಡ ಕೆಲಸ ಮಾಡುತ್ತದೆ ಎಂದರು.

ಹೊಸ ವರ್ಷ ಆಚರಣೆಯನ್ನ ಶ್ರೀರಾಮ ಸೇನೆ ಖಂಡಿಸುತ್ತದೆ. ಈ ಕೆಟ್ಟ ಪದ್ದತಿಯನ್ನ ವಿರೋಧಿಸುತ್ತಿದ್ದೇವೆ.ಯುಗಾದಿ ಹಿಂದೂಗಳಿಗೆ ಹೊಸವರ್ಷ. ಆದರೆ ಇಸ್ಕಾನ್, ಧರ್ಮಸ್ಥಳ ಮತ್ತು ರವಿ ಶಂಕರ ಗುರೂಜಿಯವರ ಆರ್ಟ್ ಆಪ್ ಲಿವಿಂಗ್​ನಲ್ಲಿ ಹೊಸ ವರ್ಷ ಆಚರಣೆ ಮಾಡುತ್ತಾರೆ. ಆದರೆ ಈ ವರ್ಷ ಹೊಸ ವರ್ಷಾಚರಣೆ ಮಾಡದಂತೆ ಎಲ್ಲರಿಗೂ ಪತ್ರ ಬರೆದಿದ್ದೇನೆ.

ಒಂದು ವೇಳೆ ಹೊಸ ವರ್ಷಾಚರಣೆ ಮಾಡಿದರೆ ಧರಣಿ ಮಾಡುತ್ತೇವೆ. ಹಿಂದುತ್ವದ ಆಧ್ಯಾತ್ಮ ಕೇಂದ್ರದಲ್ಲಿ ಹೊಸ ವರ್ಷಾಚರಣೆ ಸರಿಯಲ್ಲ ಎಂದರು‌. ಈ ಕಾಯ್ದೆ ತಂದಿರೋದು ಹಿಂದುಗಳಿಗೆ ಕಣ್ಣೋರೆಸುವ ತಂತ್ರ. ಮುಖ್ಯಮಂತ್ರಿಗಳ‌ ಕ್ಷೇತ್ರದಲ್ಲಿ ಸಾಕಷ್ಟು ಕಸಾಯಿ ಖಾನೆಗಳಿವೆ. ಸರ್ಕಾರ ರಾಜಕೀಯ ‌ಲಾಭಕ್ಕಾಗಿ ಮಸೂದೆ ತರುತ್ತಿರುವದು ಸರಿಯಲ್ಲ ಎಂದರು.

Exit mobile version