Site icon PowerTV

ವಿಚಾರಣೆ ಬಳಿಕ ಯೋಜನೆಗೆ ಕ್ರಮ

ಸದನದಲ್ಲಿ ಕೃಷ್ಣಾ ಮೇಲ್ಡಂಡೆ ಯೋಜನೆಗೆ ಎಷ್ಟು ಖರ್ಚಾಗಿದೆ, ಅನುದಾನ ಎಷ್ಟು ಎಂಬ ಬಗ್ಗೆ ಪ್ರಕಾಶ್ ರಾಥೋಡ್ ಪ್ರಶ್ನೆ ಹಾಕಿದ್ದರು, ಹಾಗೂ ಯಾವ್ಯಾವ ಇಲಾಖೆಯಿಂದ ಯೋಜನೆಗೆ ಅನುಮತಿ ಪಡೆಯಲಾಗಿದೆ ಎಂದು ಪ್ರಸ್ತಾಪ ಮಾಡಿದ್ದರು. ರಾಷ್ಟ್ರೀಯ ಯೋಜನೆ ಅನುಷ್ಟಾನಕ್ಕೆ ಬಂದಾಗ 90 ಪರಿಷತ್​ ನೆರವು ಬರಲಿದೆ. ಏಷ್ಯಾದಲ್ಲೇ ದೊಡ್ಡ ಅಣೆಕಟ್ಟು ಇದಾಗಿದೆ. 90 ಪರ್ಸೆಂಟ್ ಕೇಂದ್ರದ ನೆರವು ಪಡೆಯಬಹುದು. ಹೀಗಾಗಿ ನೀವು ಕೇಂದ್ರದ ಮೇಲೆ ಒತ್ತಾಯ ಹಾಕಬೇಕಾಗಿದೆ ಎಂದು ಹೇಳಿದರು. ಇದಕ್ಕೆ ಸಚಿವ ಕಾರಜೋಳ ಮಾತನಾಡಿ, ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗಲೇ ದೊಡ್ಡಮನಸ್ಸು ಮಾಡಿದ್ದರೆ ಅಣೆಕಟ್ಟು ಮಾಡಬಹುದಿತ್ತು.

51,148 ಕೋಟಿ ಡಿಪಿಆರ್ ಮಾಡಲಾಗಿದೆ. ಅಲ್ಲದೇ ಆಗಸ್ಟ್​ನಲ್ಲಿ ಕೇಂದ್ರ ಜಲಸಂಪನ್ಮೂಲದ ಜೊತೆ ಚರ್ಚೆ ಮಾಡಿದ್ದೇವೆ. ರಾಷ್ಟ್ರೀಯ ಯೋಜನೆ ಆಗಬೇಕು ಅಂತ ನಾನು ಒತ್ತಾಯ ಮಾಡ್ತೀನಿ. ಕಾನೂನಾತ್ಮಕ ಸಮಸ್ಯೆಗಳು ಇವೆ. ಜಲ ವಿವಾದಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ ವ್ಯಾಜ್ಯಗಳು ಸುಪ್ರೀಂ ಕೋರ್ಟ್​ನಲ್ಲಿ ಹೀಗಾಗಲೇ ಇದೆ. ಇದರ ಸಂಬಂಧಪಟ್ಟಂತೆ ಜನವರಿ 10 ರಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಫಿಕ್ಸ್ ಆಗಿದೆ. ಅದರ ಬಳಿಕ ಯೋಜನೆಗೆ ಕ್ರಮ ತೆಗೆದುಕೊಳ್ಳುತ್ತೇವೆಂದು ರಾಥೋಡ್ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

Exit mobile version