Site icon PowerTV

ಫಾಸ್ಟ್​​ ಬೌಲರ್​ಗಳೇ ಭಾರತದ ಪ್ಲಸ್​​​ : ಜಹೀರ್‌ ಖಾನ್‌

ದಕ್ಷಿಣ ಆಫ್ರಿಕಾ ಮುಂಬರುವ ಪ್ರವಾಸದ ಎಲ್ಲಾ ಪಂದ್ಯಗಳಲ್ಲಿಯೂ ಎದುರಾಳಿ ತಂಡದ 20 ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಟೀಮ್‌ ಇಂಡಿಯಾ ವೇಗಿಗಳಿಗೆ ಇದೆ ಎಂದು ಭಾರತ ತಂಡದ ಮಾಜಿ ವೇಗಿ ಜಹೀರ್‌ ಖಾನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ತಂಡ ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಟೆಸ್ಟ್‌ ಸರಣಿ ಸಲುವಾಗಿ ಭಾರತ ತಂಡದಲ್ಲಿ ಬಲಿಷ್ಠ ವೇಗಿಗಳಿದ್ದಾರೆ. ಭಾರತ ತಂಡದ ವೇಗದ ಬೌಲರ್‌ಗಳು ಕಳೆದ ಹಲವು ವರ್ಷಗಳಿಂದ ವಿಭಿನ್ನ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆಂದು ಜಹೀರ್‌ ಖಾನ್‌ ತಿಳಿಸಿದ್ದಾರೆ

.

“ಪ್ರತಿಯೊಂದು ಟೆಸ್ಟ್‌ ಪಂದ್ಯದಲ್ಲಿಯೂ 20 ವಿಕೆಟ್‌ ಪಡೆಯುವ ಸಾಮರ್ಥ್ಯವನ್ನು ಭಾರತದ ವೇಗಿಗಳು ಹೊಂದಿದ್ದಾರೆ. ಎದುರಾಳಿ ಬ್ಯಾಟಿಂಗ್ ವಿಭಾಗವನ್ನು ತಳ್ಳಿ ಹಾಕಲು ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿರುವ ವಿಭಿನ್ನತೆ ಸಾಕು,” ಎಂದು ಜಹೀರ್‌ ಖಾನ್ ಹೇಳಿದ್ದಾರೆ.

Exit mobile version