Site icon PowerTV

ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ಸ್ವಾಗತಾರ್ಹ : ಲಿಂಗರಾಜ ಪಾಟೀಲ್

ಹುಬ್ಬಳ್ಳಿ : ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ಉತ್ತಮ ಹೆಜ್ಜೆ ಇಟ್ಟಿದೆ.‌ಇದನ್ನು ಬಿಜೆಪಿ ‌ಪಕ್ಷ ಸ್ವಾಗತ ಮಾಡುತ್ತದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸಾಕಷ್ಟು ವಿಳಂಬವಾಗಿದೆ. ಆದರೂ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟು ನಿಷೇಧ ಮಾಡಿದೆ. ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ದೇಶ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದ್ದು, ಇದನ್ನು ಎಲ್ಲರೂ ಸ್ವಾಗತಿಸಬೇಕು‌ ಎಂದರು.ಮತಾಂತರದಿಂದ ಸಾಕಷ್ಟು ಅವಾಂತರವಾಗಿವೆ‌.

ಸಾಕಷ್ಟು ಕುಟುಂಬಗಳು ಮಾನಸಿಕ ಹಿಂಸೆ ಅನುಭವಿಸುತ್ತಿದೆ ಕಾಂಗ್ರೆಸ್‌ ಯಾಕೆ ವಿರೋಧಿಸುತ್ತದೆ ಎಂಬ ಬಗ್ಗೆಗೊತ್ತಾಗುತ್ತಿಲ್ಲ. ಇದನ್ನು ಎಲ್ಲರೂ ಸ್ವಾಗತಿಸಬೇಕು. ಹಾಗೂ ಅವರಿಗೂ ಇದರ ಸಮಸ್ಯೆ ಗೊತ್ತಿದೆ. ರಾಜಕೀಯಕೋಸ್ಕರ ವಿರೋಧಿಸದೆ ಮತಾಂತರ ಕಾಯ್ದೆಯನ್ನು ಸ್ವಾಗತಿಸಬೇಕು. ಆಮೀಷ ಒಡ್ಡಿ ಮತಾಂತರ ಮಾಡುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ. ಇದರಿಂದ ಸಾಮಾಜಿಕ ಪಿಡುಗು ನಿರ್ನಾಮ ಆದಂತಾಗುತ್ತದೆ‌ ಎಂದರು.

ಪಕ್ಷದ ಶಿಸ್ತು ಚೌಕಟ್ಟನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು,ಪರಿಷತ್ ಚುನಾವಣೆಯಲ್ಲಿ ಬೆಳಗಾವಿ, ಹಾಸನ ಹಾಗೂ ಕಾರವಾರದಲ್ಲಿ ಕೆಲವರು ಪಕ್ಷ ವಿರೋಧಿ ಚಟುವಟಿಕೆ ದೂರು ಬಂದಿದ್ದು, ಶಾಸಕರು ಹಾಗೂ ಸಚಿವರ ಬಗ್ಗೆ ಕೆಂದ್ರ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ.ಅವರು ಕ್ರಮ ತೆಗೆದುಕೊಳ್ಳುತ್ತಾರೆ‌ ಎಂದರು.

Exit mobile version