Site icon PowerTV

ಗೃಹಿಣಿ ಅನುಮಾನಾಸ್ಪದ ಸಾವು

ಬೆಂಗಳೂರು: 26 ವರ್ಷದ ರಂಜಿತಾ ಎಂಬ ಗೃಹಿಣಿ ಅನುಮಾನಾಸ್ಪದ ಸಾವಿಗೀಡಾಗಿರುವ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದ ಬಸ್ತಿ ಗ್ರಾಮದಲ್ಲಿ ನಡೆದಿದೆ. 2017ರಲ್ಲಿ ಮಂಜುನಾಥ್ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದ.  ರಂಜಿತಾ ಎರಡನೇ ಮಗುವಿನ ಬಾಣಂತನಕ್ಕೆ ತವರಿಗೆ ಹೋಗಿದ್ದಳು.

ವಾಪಸ್ ಗಂಡನ ಮನೆಗೆ ಬಂದಾಗ ಗಂಡ ಅಕ್ರಮ ಸಂಬಂಧ ಹೊಂದಿದ್ದ ಶಂಕೆಯಿಂದ ಆಗಾಗ ಪತಿ ಪತ್ನಿ ನಡುವೆ ಜಗಳವಾಗುತ್ತಿತ್ತು. ಇದೇ 19 ರಂದು ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ರಂಜಿತಾ ಮೃತ ದೇಹ ಪತ್ತೆಯಾಗಿದ್ದು. ರಂಜಿತಾ ಮೇಲೆ ಹಲ್ಲೆ ನಡೆಸಿ ನೇಣು ಹಾಕಿದ್ದಾರೆ ಎಂದು ಆರೋಪಿಸಿ ರಂಜಿತಾ ಪೋಷಕರು ಮಂಜುನಾಥ್​ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಮಂಜುನಾಥ್ ನನ್ನ​ ಪೊಲೀಸರು​ ವಶಕ್ಕೆ ಪಡೆದಿದ್ದಾರೆ.

Exit mobile version