Site icon PowerTV

ಸರ್ಕಾರದ ವಿರುದ್ಧ ಸಿದ್ದು ಕಿಡಿ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ RSS ಅಜೆಂಡಾ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅವರು ಟ್ಯಾಕ್ಸಿ ಡ್ರೈವ್ ಮಾಡುತ್ತಿದ್ದಾರೆ. ಸರಕಾರದ ಸಾಧನೆಗಳನ್ನು ಹೇಳೋಕೆ ಏನಿಲ್ಲ. ಆದ್ದರಿಂದ RSS ಮತಾಂತರ ನಿಷೇಧ ಕಾಯ್ದೆ ತನ್ನಿ ಎಂದು ಹೇಳಿದೆ ಎಂದರು.

ಅಂಬೇಡ್ಕರ್ ಯಾವ ಧರ್ಮದಲ್ಲಿ ಇದ್ದರು? ಹಿಂದೂ ಧರ್ಮ ಸುಧಾರಣೆ ಮಾಡಲು ನೋಡಿದೆ, ಆಗಿಲ್ಲ. ಹಾಗಾಗಿ ನಾನು ಬೌದ್ಧ ಧರ್ಮಕ್ಕೆ ಹೋಗುತ್ತೇನೆ ಎಂದು ಹೇಳಿದ್ರು ಎಂದ ಸಿದ್ದು, ಆರ್ಟಿಕಲ್ 21, 25 ಈಶ್ವರಪ್ಪನಿಗೆ ಗೊತ್ತಿದೆಯಾ? ಎಂದು ಪ್ರಶ್ನಿಸಿದರು. ಮತಾಂತರ ಕಾಯ್ದೆಯನ್ನು ಕಳ್ಳರ ಹಾಗೆ ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಇದರ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ. ಸಂವಿಧಾನ ಬಾಹಿರವಾದ ಕಾಯ್ದೆಗಳನ್ನ ತರ್ತಾ ಇದ್ದಾರೆ ಎಂದು ಸಿದ್ದು ಆರೋಪಿಸಿದರು.

Exit mobile version