Site icon PowerTV

MES ಪುಂಡರ ಬಗ್ಗೆ ಶಿವರಾಜ್​ಕುಮಾರ್ ಹೇಳಿಕೆ

ದೇವನಹಳ್ಳಿ: ಯಲಹಂಕದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಚಿತ್ರನಟ ಶಿವರಾಜಕುಮಾರ್ ಎಂಇಎಸ್ ಪುಂಡರ ಗಲಾಟೆಯ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಯಾವುದೇ ರಾಜ್ಯದ ಬಾವುಟಗಳನ್ನು ಯಾರು ಸುಡಬಾರದು. ಪ್ರತಿಯೊಬ್ಬರಿಗೂ ಅವರವರ ರಾಜ್ಯದ ಬಾವುಟಗಳ ಬಗ್ಗೆ ತುಂಬಾನೆ ಗೌರವ ಇರುತ್ತೆ. ಬಾವುಟಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು, ಕೂಡಲೇ ಸರ್ಕಾರ ತಪ್ಪತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತದೆ ಎಂದವರು ಕರೆ ನೀಡಿದರು.

ಯಲಹಂಕ ಕೋಗಿಲು ಬಳಿ ವಾಜಪೇಯಿ ಕ್ರಿಕೆಟ್ ಪಂದ್ಯದ ಜರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವರಾಜ್​ಕುಮಾರ್ ಈ ರೀತಿ ಹೇಳಿದ್ದಾರೆ.  ಡಿಸೆಂಬರ್ 25ಕ್ಕೆ ದಿವಂಗತ ವಾಜಪೇಯಿ ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲುವಿನ ಜಕ್ಕೂರು ವಾರ್ಡ್​ನ ಸುಪ್ರಸಿದ್ದ ಸ್ಪೋರ್ಟ್ಸ್ ಕ್ಲಬ್​ನಲ್ಲಿ ಕ್ರಿಕೆಟ್ ಟೂರ್ನಿ ನಡೆಯಲಿದೆ.

Exit mobile version