Site icon PowerTV

ಡಿಕೆಶಿಗೆ ಹೆಣ್ಮಕ್ಕಳ ಕಷ್ಟ ಗೊತ್ತಿಲ್ಲ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತಾಂತರಕ್ಕೆ ಒಳಗಾದ ಹೆಣ್ಣುಮಕ್ಕಳ ಕಷ್ಟ ಗೊತ್ತಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಮತಾಂತರ ಕಾಯ್ದೆ ತರುತ್ತಿರುವ ಉದ್ದೇಶ ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು ಎಂದು. ಆಸೆ, ಆಮಿಷ ತೋರಿಸಿ ಮತಾಂತರ ಮಾಡಲಾಗ್ತಿದೆ. ವಿಕಲಾಂಗರಿಗೆ ಆಮಿಷ ತೋರಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾನೂನುಬದ್ದವಾಗಿ ಯಾವ ಧರ್ಮದವರು,  ಯಾವ ಧರ್ಮಕ್ಕೆ ಬೇಕಾದ್ರೂ ಹೋಗಬಹುದು. ಮತಾಂತರ ಆಗಲು ಡಿಸಿ ಬಳಿ ಅರ್ಜಿ ಹಾಕಬಹುದು. ಒಂದು ವೇಳೆ ಬೇಡ ಅಂದ್ರೆ ಹಿಂದಕ್ಕೆ ಬರಬಹುದು. ಇದಕ್ಕೆ ಕಾಂಗ್ರೆಸ್, ಜೆಡಿಎಸ್ ಯಾಕೆ ವಿರೋಧಿಸ್ತಿದ್ದಾರೆ ಗೊತ್ತಿಲ್ಲ ಎಂದು ಕುಟುಕಿದರು.

Exit mobile version