Site icon PowerTV

ಪಿಕ್ಚರ್​ ಅಭಿ ಬಾಕಿ ಹೈ : ಸಚಿವ ನಿತಿನ್ ಗಡ್ಕರಿ

ಇದು ಕೇವಲ ಟ್ರೇಲರ್ ಅಷ್ಟೇ ನಿಜವಾದ ಫಿಲ್ಮ್ ಇನ್ನೂ ಬಾಕಿ ಇದೆ ಎಂದು ಹೇಳುವ ಮೂಲಕ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಡಿ ಹೊಗಳಿದ್ದಾರೆ.

ಬಿಜ್ನೋರ್ ಜಿಲ್ಲೆಯ ಚಾಂದ್‍ಪುರದಲ್ಲಿ ಬಿಜೆಪಿಯ ಜನ ವಿಶ್ವಾಸ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಉತ್ತರ ಪ್ರದೇಶದಲ್ಲಿರುವ ಮಾಫಿಯಾವನ್ನು ಮಾತ್ರ ತೊಡೆದುಹಾಕುತ್ತಿಲ್ಲ. ಜೊತೆಗೆ ಬಡತನ, ಹಸಿವು ಮತ್ತು ನಿರುದ್ಯೋಗವನ್ನು ಸಹ ಕೊನೆಗೊಳಿಸಲಿದ್ದೇವೆ. ನೀವು ನೋಡಿದ್ದು ಕೇವಲ ಐದು ವರ್ಷಗಳ ಟ್ರೇಲರ್ ಅಷ್ಟೇ. ನಿಜವಾದ ಫಿಲ್ಮ್ ಇನ್ನೂ ಪ್ರಾರಂಭವಾಗಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಮತ್ತೊಮ್ಮೆ ಅಧಿಕಾರ ನಡೆಸಲು ಅವಕಾಶ ನೀಡಿ ಶಾಂತಿಯಿಂದ ಕುಳಿತು ಹೇಗೆ ಪವಾಡಗಳು ನಡೆಯುತ್ತವೆ ಎಂಬುವುದನ್ನು ಕಾದು ನೋಡಿ ಎಂದು ತಿಳಿಸಿದ್ದಾರೆ.

Exit mobile version