Site icon PowerTV

ಕೃಷ್ಣಾಲಯಕ್ಕಾಗಿ ಹೇಮಮಾಲಿನಿ ಮನವಿ

ಅಯೋಧ್ಯೆ, ಕಾಶಿ ನಂತರ ತಮ್ಮ ಲೋಕಸಭಾ ಕ್ಷೇತ್ರ ಮಥುರಾದಲ್ಲಿ ಬೃಹತ್ ದೇವಾಲಯ ನಿರ್ಮಿಸುವಂತೆ ಬಿಜೆಪಿ ಸಂಸದೆ ಹೇಮಾಮಾಲಿನಿ ಮನವಿ ಮಾಡಿಕೊಂಡಿದ್ದಾರೆ.

ಇಂದೋರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೇಮಾಮಾಲಿನಿ, ರಾಮ ಜನ್ಮಭೂಮಿ, ಕಾಶಿ ಜೀರ್ಣೋದ್ಧಾರದ ನಂತರ ಮಥುರಾ ಕೂಡ ಅತ್ಯಂತ ಮಹತ್ವದ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ. ಮಥುರಾದಲ್ಲಿ ಈಗಾಗಲೇ ದೇವಸ್ಥಾನವಿದೆ. ಮೋದಿಜಿ ಅಭಿವೃದ್ಧಿಪಡಿಸಿದ ಕಾಶಿ ವಿಶ್ವನಾಥ್ ಕಾರಿಡಾರ್ ಮಾದರಿಯಲ್ಲಿ ಅದನ್ನು ಅಭಿವೃದ್ದಿಪಡಿಸಬೇಕಿದೆ ಎಂದು ಕೋರಿದ್ದಾರೆ.

ಪ್ರೇಮ, ವಾತ್ಸಲ್ಯದ ಸಂಕೇತವಾದ ಕೃಷ್ಣ ಭಗವಾನ್‌ ಜನ್ಮಸ್ಥಳ ಮಥುರಾ ಸಂಸದಳಾಗಿ ಅಲ್ಲಿ ಒಂದು ದೊಡ್ಡ ದೇವಾಲಯ ಇರಬೇಕೆಂದು ನಾನು ಬಯಸುತ್ತೇನೆ ಎಂದು ಹೇಮಮಾಲಿನಿ ಅವರು ತಿಳಿಸಿದರು.

Exit mobile version