Site icon PowerTV

ಎಂಇಎಸ್ ಪುಂಡಾಟಕ್ಕೆ ಬ್ರೇಕ್ ಹಾಕಿ!

ಬೆಳಗಾವಿ: ಎಂಇಎಸ್‌ಗೆ ನಿಷೇಧ ಹೇರುವ ವಿಚಾರದ ಬಗ್ಗೆ ಪರಿಶೀಲನೆ ಮಾಡ್ತೀವಿ. ಗಡಿ ಕ್ಯಾತೆ ವಿಚಾರ ಇನ್ನೂ ಸುಪ್ರೀಂಕೋರ್ಟ್‌ನಲ್ಲಿದೆ. ಕ್ಯಾತೆ ಗಳ ಮೂಲಕ ಆ ಕೇಸ್‌ ವಿಚಾರಣೆ ಮೇಲೆ ಪ್ರಭಾವ ಬೀರ್ತೀವಿ ಅಂದ್ರೆ ಅದು ಎಂಇಎಸ್‌ ಭ್ರಮೆ. ಎಲ್ಲದಕ್ಕೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತೆ. ಕಾನೂನಿನಲ್ಲಿ ಅವಕಾಶ ಇದ್ರೆ ಎಂಇಎಸ್‌ ಮೇಲೆ ನಿಷೇಧ ಹೇರುತ್ತೇವೆ ಎಂದ ಸಿಎಂ ಬೊಮ್ಮಾಯಿ ಜೊತೆಗೆ, ಸುವರ್ಣಸೌಧದ ಆವರಣದಲ್ಲಿ ರಾಯಣ್ಣ, ಚೆನ್ನಮ್ಮ ಪ್ರತಿಮೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು.

ಸದ್ಯ ಎಂಇಎಸ್‌ ಪುಂಡರ ಆಟಕ್ಕೆ ಬ್ರೇಕ್‌ ಹಾಕುವ ಕಾಲ ಬಂದಿದೆ ಎಂದು ಆಡಳಿತಾರೂಢ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಜೊತೆಗೆ, ವಿಪಕ್ಷಗಳು ಎಂಇಎಸ್‌ ನಿಷೇಧಕ್ಕೆ ಒತ್ತಾಯಿಸಿವೆ. ಇದೆಲ್ಲದ್ರ ಮಧ್ಯೆ, ಕಾನೂನಿನಲ್ಲಿ ಅವಕಾಶ ಇದ್ರೆ, ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ ಸಿಎಂ. ರಾಜಕೀಯ ಲೆಕ್ಕಾಚಾರ ಏನಾದ್ರೂ ಸರಿಯೇ ನಾವು ಪುಂಡರಿಗೆ ತಕ್ಕ ಪಾಠ ಕಲಿಸ್ತೀವಿ ಅಂತ ಕನ್ನಡಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಬ್ಯೂರೋ ರಿಪೋರ್ಟ್, ಪವರ್‌ ಟಿವಿ

Exit mobile version