Site icon PowerTV

ವಿಶ್ವದ ವಯೋವೃದ್ಧೆ ಸಾವು

ಚೀನಾ: ವಿಶ್ವದಲ್ಲೇ ಅತ್ಯಂತ ವಯೋವೃದ್ಧ ವ್ಯಕ್ತಿ ಎಂಬ ಹಿರಿಮೆ ಹೊಂದಿದ್ದ ಚೀನಾದ ಅಲಿಮಿಹಾನ್‌ ಸೆಯಿತಿ ತಮ್ಮ 135ನೇ ವಯಸ್ಸಿನಲ್ಲಿ ಕ್ಸಿನ್‌ ಜಿಯಾಂಗ್‌ ಉಯಿಗುರ್‌ ಸ್ವಾಯತ್ತ ಪ್ರದೇಶದಲ್ಲಿ ನಿಧನರಾಗಿದ್ದಾರೆ. ಚೀನಾದ ದಾಖಲೆಯ ಪ್ರಕಾರ ಜೂನ್‌ 25, 1886ರಂದು ಜನಿಸಿದ ಸೆಯಿತಿ, ‘ದೀರ್ಘಾಯುಷಿಗಳ ಪಟ್ಟಣ’ವೆಂದೇ ಪ್ರಸಿದ್ಧಿ ಪಡೆದ ಕೊಮುಕ್ಸೆರಿಕ್‌ ಟೌನ್‌ಶಿಪ್‌ನವರು.

2013ರಲ್ಲಿ ಚೀನಾದ ಹಿರಿಯ ಜೀವಂತ ವ್ಯಕ್ತಿಗಳ ಪಟ್ಟಿಯಲ್ಲಿ ಇವರು ಅಗ್ರಸ್ಥಾನ ಪಡೆದಿದ್ದರು. ನಿಧನರಾಗುವವರೆಗೂ ಸೆಯಿತಿ ಆರೋಗ್ಯವಾಗಿದ್ದರು. ಅವರಿಗೆ ದೃಷ್ಟಿದೋಷವಾಗಲೀ, ಶ್ರವಣ ಸಂಬಂಧಿ ಸಮಸ್ಯೆಯಾಗಲೀ ಇರಲಿಲ್ಲ. ನೆನಪಿನ ಶಕ್ತಿ ಕೂಡ ಚೆನ್ನಾಗಿತ್ತು. ಬನ್‌, ಮೀನು, ಹಣ್ಣುಗಳನ್ನು ಸೇವಿಸುತ್ತಿದ್ದರು..ಆರೋಗ್ಯ ಸೇವೆಗಳ ಸುಧಾರಣೆಯು ಅವರ ದೀರ್ಘಾಯುಷ್ಯಕ್ಕೆ ಭಾಗಶಃ ಕೊಡುಗೆ ನೀಡಿದೆ.

Exit mobile version