Site icon PowerTV

ಗಜದಂತ ಚೋರನ ಬಂಧನ

ರಾಮನಗರ: ದಂತಚೋರ ಎಂದರೆ ಥಟ್ಟನೆ ನೆನಪಾಗುವುದು ವೀರಪ್ಪನ್. ಈಗ ವೀರಪ್ಪನ್ ಸತ್ತು ಇತಹಾಸದ ಪುಟ ಸೇರಿದ್ದಾನೆ. ಆದರೆ ಆನೆಗಳಿಗೆ ಮಾತ್ರ ದಂತಚೋರರ ಕಾಟ ತಪ್ಪಿಲ್ಲ. ಇದೀಗ ಆನೆ ದಂತ ಮಾರಾಟ ಮಾಡಲು ಯತ್ನಿಸಿದ ಆರೋಪಿಯೊಬ್ಬನನ್ನು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಬಂಧಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮರಿಸ್ವಾಮಿ ಎಂಬಾತ ಬಂಧಿತ ಆರೋಪಿ ಅಕ್ರಮವಾಗಿ ಎರಡು ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ.ಈ ವೇಳೆ ಅರಣ್ಯಾಧಿಕಾರಿಗಳಾದ ಅಮೃತ್ ದೇಸಾಯಿ, ಸಿದ್ದರಾಜು, ಚಿದಾನಂದ್, ಅಶೋಕ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಸದ್ಯ ಆರೋಪಿಯನ್ನು ಬಂಧಿಸಿ ಆನೆ ದಂತಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನಿಂದ ಸುಮಾರು 25 ಕೆ.ಜಿ.ತೂಕದ 2 ಆನೆ ದಂತಗಳ್ನ ಜಪ್ತಿ ಮಾಡಲಾಗಿದೆ.

Exit mobile version