Site icon PowerTV

ಪೊಲೀಸರಿಗೆ ಭದ್ರತೆ!

ಬೆಳಗಾವಿ: ಕರ್ನಾಟಕದ ಪೊಲೀಸರಿಗೆ ಮಹಾರಾಷ್ಟ್ರದ ಪೊಲೀಸರು ಭದ್ರತೆ ಒದಗಿಸಿದ ಅಪರೂಪದ ಘಟನೆ ಶನಿವಾರ ನಡೆದಿದೆ. ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಭದ್ರತೆ ಒದಗಿಸಲು ಬೆಳಗಾವಿಗೆ ಆಗಮಿಸಿದ್ದ ಕರ್ನಾಟಕದ ಪೊಲೀಸರು, ಶನಿವಾರ ರಜೆಯಿದ್ದ ಕಾರಣ ಲಕ್ಷ್ಮಿದೇವಿಯ ದರ್ಶನ ಪಡೆಯಲು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ತೆರಳಿದ್ದರು.

ಆದರೆ, ಈ ವೇಳೆ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ಶಿವಸೇವೆ ಪುಂಡರು ದಾಂಧಲೆ ನಡೆಸುತ್ತಿದ್ದರು. ಕರ್ನಾಟಕದ ವಾಹನಗಳ ಮೇಲೆ ದಾಳಿ ನಡೆಸಿ, ಮಸಿ ಬಳಿಯುತ್ತಿದ್ದರು. ಈ ಹಿನ್ನೆಲೆ ರಕ್ಷಣೆ ನೀಡುವಂತೆ ಕೊಲ್ಹಾಪುರದ ಪೊಲೀಸರ ಬಳಿ, ರಾಜ್ಯ ಪೊಲೀಸರು ಕೋರಿದ್ದು, ಇದಕ್ಕೆ ಸ್ಪಂದಿಸಿದ ಅಲ್ಲಿನ ಪೊಲೀಸರು ರಾಜ್ಯದ ಗಡಿ ತನಕ ಭದ್ರತೆ ನೀಡಿದ್ದಾರೆ. ಕರ್ನಾಟಕದ ಪೊಲೀಸರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿರೋ ವಿಡಿಯೋ ವೈರಲ್‌ ಆಗಿದೆ.

Exit mobile version