Site icon PowerTV

ಪಿಎಸ್​ಐ ಮುತ್ತಣ್ಣನ ಮಹಾಮೋಸ

ಕೊಪ್ಪಳ: ಕಪ್ಪಳದಲ್ಲೊಬ್ಬ PSI ಮಹಿಳೆಯರ ಭಾವನೆಗಳೊಂದಿಗೆ ಆಟವಾಡಿ ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಫಿಂಗರ್ ಪ್ರಿಂಟ್ ವಿಭಾಗದಲ್ಲಿರುವ  ಮುತ್ತಪ್ಪ ಬಡಿಗೇರ್  ಎಂಬ PSI ನಿಂದ ಮಾಹಾಮೋಸ ನಡೆದಿದೆಯೆನ್ನಲಾಗಿದೆ. ಇದುವರೆಗೂ ನಾಲ್ಕೈದು ಮಹಿಳೆಯರಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಈ PSI ಮೋಸ ಮಾಡಿದ್ದಾನೆ ಎನ್ನಲಾಗಿದೆ.

ಈ ವಿಷಯವಾಗಿ ಕಳೆದ ಮೂರು ದಿನಗಳಿಂದ ಕೊಪ್ಪಳ ಎಸ್ಪಿ ತಲೆ ಬಿಸಿ ಮಾಡಿಕೊಂಡಿದ್ದಾರೆ. ಎಸ್ಪಿ ಟಿ  ಶ್ರೀಧರ್ ಅವರಿಗೆ ಮುತ್ತಣ್ಣನ ಪ್ರಕರಣದಿಂದ ತಲೆ ಬಿಸಿಯಾಗಿದೆ. ಏಕೆಂದರೆ ಮೋಸ ಹೋದವರು ಎಸ್ಪಿ ಕಚೇರಿಗೆ ಆಪಮಿತಿ ನ್ಯಾಯ ಕೇಳಿದ್ದಾರೆ.

ಎಸ್ಪಿ ಮುತ್ತಣ್ಣ ವಧು ನೋಡುವ ನೆಪದಲ್ಲಿ ಹುಡುಗಿಯರನ್ನು ಯಾಮಾರಿಸುತ್ತಿದ್ದ ಎನ್ನಲಾಗಿದೆ. ಮಹಿಳೆಯರನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಈ ರೀತಿಯ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮುತ್ತಣ್ಣ ವಿರುದ್ಧ ನಿನ್ನೆ ಮಹಿಳೆಯೊಬ್ಬರ ಕುಟುಂಬದಿಂದ ಎಸ್ಪಿ ಅವರಿಗೆ ಮೌಖಿಕ ದೂರು ಸಲ್ಲಿಸಲಾಗಿದೆ. ನಗರಠಾಣೆ ಸಿಪಿಐ ಎಸ್ಪಿ ಅಣತಿಯಂತೆ  ತಮ್ಮ ಇಲಾಖೆಯ ಮಾನ ಉಳಿಸಿಕೊಳ್ಳಲು ದೂರು ಕೊಟ್ಟವರ ಮನವೊಲಿಸಿ ಊರಿಗೆ ವಾಪಸ್ಸು ಕಳುಹಿಸದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಎಸ್ಪಿ ಕಚೇರಿಯಿಂದ  ಮುತ್ತಣ್ಣ ಬಡಿಗೇರ್ ಎಸ್ಕೇಪ್ ಆಗಿದ್ದಾರೆ.  ಮುತ್ತಣ್ಣ ವರ್ತನೆಗೆ ಎಸ್ಪಿ ಗರಂ ಆಗಿದ್ದಾರೆ. ಮುತ್ತಣ್ಣನ ವಿರುದ್ಧ ಕ್ರಮಕೈಗೊಳ್ಳುವಂತೆ‌ ಫಿಂಗರ್ ಪ್ರಿಂಟ್ ವಿಭಾಗದ ADG ಗೆ SP ಟಿ ಶ್ರೀಧರ್ ಪತ್ರ ಬರೆದಿದ್ದಾರೆ.  ಈ ಹಿಂದೆಯೂ ಒಂದೆರಡು ಬಾರಿ ಮುತ್ತಣ್ಣನಿಗೆ ಎಸ್ಪಿ ಶ್ರೀಧರ್ ವಾರ್ನ್ ಮಾಡಿದ್ದರು ಎನ್ನಲಾಗಿದೆ.

Exit mobile version