Site icon PowerTV

ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಢಾಕಾ: ಎಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸೆಮಿಫೈನಲ್​ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ತಂಡ ಇಂದು ಜಪಾನ್ ವಿರುದ್ಧ 6-0 ಗೋಲುಗಳಿಂದ ಭರ್ಜರಿ ಜಯಗಳಿಸಿತು. ಇಡೀ ಪಂದ್ಯದಲ್ಲಿ ಎಲ್ಲೂ ಜಪಾನಿಯರಿಗೆ ಗೋಲು ಮಾಡುವ ಅವಕಾಶವನ್ನೇ ಕೊಡದ ಮನ್​ಪ್ರಿತ್ ಬಳಗದ ಭಾರತ ತಂಡವು ಇಂದಿನ ರೌಂಡ್ ರಾಬಿನ್ ಅಂತಿಮ ಪಂದ್ಯದಲ್ಲಿ ಜಪಾನಿನ ವಿರುದ್ಧ ಲೀಲಾಜಾಲವಾಗಿ ಅರ್ಧಡಜನ್ ಗೋಲುಗಳನ್ನು ಬಾರಿಸಿ ಜಯಭೇರಿ ಬಾರಿಸಿತು.

ಭಾರತ ಈ ಚಾಂಪಿಯನ್​ಶಿಪ್​ನ ಆರಂಭಿಕ ಪಂದ್ಯಗಳಲ್ಲಿ ನಿಧಾನಗತಿಯ ಆರಂಭವನ್ನು ಮಾಡಿತ್ತು. ಆದರೆ ನಂತರ ಲಯಕ್ಕೆ ಮರಳಿದ ಎರಡು ಬಾರಿ ಒಲಂಪಿಕ್ ಚಿನ್ನದ ಪದಕ ವಿಜೇತ ಭಾರತ ತಂಡವು ಪಾಕಿಸ್ತಾನ ಮತ್ತು ಜಪಾನ್ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಫೈನಲ್ ಗೆಲ್ಲುವ ವಿಶ್ವಾಸ ಹೊಂದಿದೆ.

Exit mobile version