Site icon PowerTV

ಮೊಟ್ಟೆ ವಿಚಾರಕ್ಕೆ ಮಗನನ್ನೇ ಶಾಲೆ ಬಿಡಿಸಿದ ಅಪ್ಪ!

ಕೊಪ್ಪಳ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯಿಂದ‌ ಮಗನ ಟಿಸಿಯನ್ನೇ ತಂದೆಯೊಗ್ಬ ಪಡೆದ ಘಟನೆ ನಡೆದಿದೆ.  ಕೊಪ್ಪಳದ ವೀರಣ್ಣ ಕೋರ್ಲಹಳ್ಳಿಯೆಂಬ ಈ ಹೆತ್ತಪ್ಪನೆ ಮಗನ ಟಿಸಿ ಪಡೆದ ಮಹಾನುಭಾವ. ಈತ ಅಖಿಲ ಭಾರತ ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷನೆಂದು ಹೇಳಲಾಗಿದೆ.

ಒಂದನೆ ತರಗತಿ ಓದುತ್ತಿರುವ ಮಗ ಶರಣ ಬಸವಕಿರಣ ಎಂಬ ತಮ್ಮ ಮಗನ ವರ್ಗಾವಣೆ ಪತ್ರವನ್ನು ಸರ್ಕಾರಿ ಶಾಲೆಯಿಂದ ಪಡೆಯುವ ಮೂಲಕ ಖಾಸಗಿ ಶಾಲೆಗೆ ಸೇರಿಸಿದ್ದಾರೆ ವೀರಣ್ಣ. ಇದಕ್ಕೆ ಕಾರಣ ಪ್ರಸ್ತುತ ಶಾಲೆಯಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮಕ್ಕಳಿಗೆ ಮೊಟ್ಟೆ ನೀಡುತ್ತಿರುವುದು ಕಾರಣವೆಂದು ವೀರಣ್ಣ ಹೇಳಿದ್ದಾರೆ. ಮೋಟ್ಟೆ ನೀಡುವುದು ನನ್ನ ಧರ್ಮಕ್ಕೆ ವಿರೋಧವೆಂದಿರುವ ಅವರು ಒಂದೆರಡು ದಿನ ನನ್ನ ಮಗ ಮೊಟ್ಟೆ ತಿನ್ನದೆ ಇರಬಹುದು, ಆದರೆ ಮುಂದೆ ಬೇರೆ ಮಕ್ಕಳು ತಿನ್ನುವುದನ್ನು ನೋಡಿ ನನ್ನ ಮಗನೂ ತಿನ್ನಬಹುದು. ಇದೇ ಕಾರಣಕ್ಕೆ ನಾನು ನನ್ನ ಮಗನನ್ನು ಖಾಸಗಿ ಶಾಲೆಗೆ ಸೇರಿಸಿದ್ದೇನೆ ಎಂದಿದ್ದಾರೆ. ಇದಿಷ್ಟೆ ಅಲ್ಲದೆ ಇದೆಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ ವೀರಣ್ಣ.

ಇಷ್ಟೆಲ್ಲ ಮಾತಾಡಿರುವ ವೀರಣ್ಣನವರಿಗೆ ಧರ್ಮ ಮತ್ತು ಜಾತಿಯ ನಡುವೆ ವ್ಯತ್ಯಾಸ ಗೊತ್ತಿಲ್ಲದಿರುವುದು ವಿಷಾದನೀಯ. ಹಿಂದೂ ಧರ್ಮದಲ್ಲಿಯ ಒಂದು ಜಾತಿಯೆ ಹೊರತು ಅದೇ ಒಂದು ಪ್ರತ್ಯೇಕ ಧರ್ಮವಲ್ಲ ಎಂಬ ಒಂದು ಸಣ್ಣ ಸಂಗತಿಯೂ ಗೊತ್ತಿಲ್ಲದ ವೀರಣ್ಣ ಅಖಿಲ ಭಾರತ ಲಿಂಗಾಯಿತ್ ಮಹಾಸಭಾ ರಾಜ್ಯಾಧ್ಯಕ್ಷರಂತೆ!

Exit mobile version