Site icon PowerTV

ಮಹಿಳೆಯರನ್ನು ಮಂಚಕ್ಕೆ ಕರೆಯುವ ಕಿರಾತಕ ಸಿಪಿಐ

ಹಾವೇರಿ : ಕಂಪ್ಲೇಂಟ್ ಕೊಡೋಕೆ ಬಂದ ಮಹಿಳೆಯರನ್ನು ಮಂಚಕ್ಕೆ ಆಹ್ವಾನಿಸುತ್ತಿದ್ದ ಕಿರಾತಕ ಸಿ.ಪಿ.ಐ ಒಬ್ಬನ ಬಗ್ಗೆ ಹಾವೇರಿಯಿಂದ ವರದಿಯಾಗಿದೆ. ಕಂಪ್ಲೇಂಟ್ ಕೊಡೋಕೆ ಬಂದ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದರು ಎನ್ನಲಾಗಿದೆ. ಈ ವಿಷಯವಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿದ್ದ ಹೆಣ್ಣು ಬಾಕ ಸಿ.ಪಿ.ಐ ಈಗ ಸಸ್ಪೆಂಡ್ ಆಗಿ ಮನೆಯಲ್ಲಿದ್ದಾನೆ.

ಮಹಿಳೆಯರ ಜೊತೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ CPI ಚಿದಾನಂದ ಸಸ್ಪೆಂಡ್ ಆಗಿದ್ದಾನೆ. ಹಾವೇರಿ ಜಿಲ್ಲೆಯಾದ್ಯಂತ ಹರಿದಾಡ್ತಿದೆ ಸಿ.ಪಿ ಐ ಚಿದಾನಂದ ಮಹಿಳೆಯರ ಜೊತೆ ಅನುಚಿತವಾಗಿ ಮಾತಾಡಿರೋ ವಿಡಿಯೋ, ಆಡಿಯೋಗಳು. ಕೆಲ ದಿನಗಳ ಹಿಂದೆ  ಅನ್ನಪೂರ್ಣ ಎಂಬ ಮಹಿಳೆಯೂ  ‌ಸಿ.ಪಿ ಐ ಚಿದಾನಂದ ಮೇಲೆ ದಾವಣಗೆರೆ  IGPಯವರಿಗೆ ದೂರು ನೀಡಿದ್ದರು. ಮಗಳ ಕೇಸ್ ಮುಂದಿಟ್ಟುಕೊಂಡು  ತಮಗೆ ಕಿರುಕುಳ ನೀಡಿರುವುದಾಗಿ ಅನ್ನಪೂರ್ಣರವರು ದೂರಿನಲ್ಲಿ ತಿಳಿಸಿದ್ದಾರೆ.

ಸಿಪಿಐ ಚಿದಾನಂದ ತಮ್ಮ ಅಪ್ರಾಪ್ತ ಮಗಳನ್ನು ತಮ್ಮ  ವಿರುದ್ದವೇ ಎತ್ತಿಕಟ್ಟಿ  ಕಂಪ್ಲೇಂಟ್ ಮಾಡಿಸಿದ್ದರಂತೆ. 2016 ರಲ್ಲಿ ಅನ್ನಪೂರ್ಣ ತಮ್ಮ ಪುತ್ರಿ ನಾಪತ್ತೆಯಾಗಿರುವ ಕುರಿತು ದೂರು ನೀಡಲು ಬ್ಯಾಡಗಿ ಠಾಣೆಗೆ ಹೋಗಿದ್ದರು. ಆಗಲೂ ತಮ್ಮ ಮನೆಗೆ ಕರೆದು ಸಹಕರಿಸುವಂತೆ ಬಲವಂತ ಮಾಡಿದ್ದರಂತೆ ಸಿಪಿ ಐ ಚಿದಾನಂದ್. ಪಾಪ ನೀನು ಗಂಡ ಬಿಟ್ಟವಳು,ನಾನು ನಿನಗೆ ಸಹಾಯ ಮಾಡ್ತೀನಿ ಅಂತ ನಂಬಿಸಿ ಮಂಚಕ್ಕೆ ಕರೆದಿದ್ದರಂತೆ ಚಿದಾನಂದ್. ಆದರೆ ಅನ್ನಪೂರ್ಣ ತಾವು ಅದಕ್ಕೆ ಒಪ್ಪಿರಲಿಲ್ಲವೆಂದು ಹೇಳಿದ್ದಾರೆ. ಆದರೆ ಇದೀಗ ಮಗಳ ಲವ್ ಕೇಸ್ ಮುಂದಿಟ್ಟುಕೊಂಡು ಮತ್ತೆ ಆಟ ಆಡ್ತಿದ್ದಾನೆ ಎಂದು IGP ಯವರಿಗೆ ದೂರು ನೀಡಿದ್ದಾರೆ ಅನ್ನಪೂರ್ಣ.

Exit mobile version