Site icon PowerTV

ಸಂಯಮ,ಶಾಂತಿ ಸೌಹಾರ್ಧತೆ ಕಾಪಾಡಿ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬೆಳಗಾವಿಯಲ್ಲಿ MES ಪುಂಡರ ಪುಂಡಾಟಕ್ಕೆ ಸಿದ್ದರಾಮಯ್ಯ ಟ್ಚಿಟರ್​ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದು, ಸರ್ಕಾರವು ಈ ವಿರುದ್ಧ ತಕ್ಷಣ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯವಾಗಿದೆ. ಹಾಗೂ ತಕ್ಷಣವೇ ಆ ಗೂಂಡಾಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತು ಮುಖ್ಯಮಂತ್ರಿಯವರೇ, ಕ್ರಿಯೆಗೆ ಪ್ರತಿಕ್ರಿಯೆ ಎಂಬ  ಮೊಂಡುವಾದವನ್ನು ಮಂಡಿಸದೆ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ.

Exit mobile version