Site icon PowerTV

ಭುವನಸುಂದರಿ ಯಶಸ್ಸಿನ ಹಿಂದೆ ತೃತೀಯ ಲಿಂಗಿ!

ಮುಂಬೈ: ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಹೇಳುವುದುಂಟು. ಇದೀಗ ಭುವನಸುಂದರಿಯ ಗೆಲುವಿನ ಹಿಂದೆ ಒಬ್ಬ ತೃತೀಯ ಲಿಂಗಿ ಇದ್ದಾಳೆ ಎಂಬ ಸುದ್ದಿ ಹೊರಬಿದ್ದಿದೆ.  ಭಾರತ 21 ವರ್ಷಗಳ ನಂತರ ಮೂರನೆಯ ಬಾರಿಗೆ ಸಂಧುವಿನ ರೂಪದಲ್ಲಿ ಗೆದ್ದ ಭುವನಸುಂದರಿಯ ಗೆಲುವಿನ ಹಿಂದೆ ಸಾಯಿಶಾ ಶಿಂಧೆ ಎಂಬ ತೃತೀಯ ಲಿಂಗಿ ಇದ್ದಾಳೆ ಎನ್ನುವ ಸುದ್ದಿ ಇದೀಗ ವೈರಲ್ ಆಗಿದೆ.

ಅದು ಹೇಗೆ ತೃತೀಯ ಲಿಂಗಿ ಸಾಯಿಶಾ ಶಿಂಧೆ ಭುವನಸುಂದರಿ ಸ್ಪರ್ದೆ ಗೆದ್ದ ಹರ್ನಾಜ್ ಸಂಧು ಅವರ ಗೆಲುವಿನ ಹಿಂದಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಗೊಂದಲ ಮೂಡಿಸಿದ್ದರೆ ಅದನ್ನು ಈಗ ಹೇಳ್ತೀವಿ ಕೇಳಿ. ಹರ್ನಾಜ್ ಸಂಧು ಭುವನಸುಂದರಿ ಸ್ಪರ್ದೆ ಗೆದ್ದು ಕಿರೀಟ ತೊಡುವಾಗ ಅವರು ಹಾಕಿದ್ದ ಗೌನ್ ಎಲ್ಲರ ಗಮನ ಸೆಳೆದಿತ್ತು. ಅದನ್ನು ವಿನ್ಯಾಸ ಮಾಡಿದ್ದು ಮುಂಬೈ ಮೂಲದ ವಸ್ತ್ರ ವಿನ್ಯಾಸಕಾರರಾದ  ಸಾಯಿಶಾ ಶಿಂಧೆ ಎಂಬ ತೃತೀಯ ಲಿಂಗಿ!

ಮುಂಚೆ ಸ್ವಪ್ನಿಲ್ ಶಿಂಧೆ ಆಗಿದ್ದ ಅವರು, ನಂತರ ಲಿಂಗಪರಿವರ್ತನೆ ಮಾಡಿಸಿಕೊಂಡು ಸಾಯಿಶಾ ಶಿಂಧೆ ಆಗಿದ್ದಾರೆ. ಇವರ ವಿಭಿನ್ನ ವಸ್ತ್ರವಿನ್ಯಾಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

Exit mobile version