Site icon PowerTV

ಬಿಜೆಪಿಗರು ಹಿಂದೂ ಧರ್ಮದ ಪ್ರತಿಪಾದಕರು : ಬಂಗಾಳ ಸಿಎಂ ದೀದಿ

ಗೋವಾ : ತಾವು ಮಾತ್ರ ಹಿಂದೂಗಳು ಎಂದು ಬಿಜೆಪಿ ಭಾವಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಹಿಂದೂವಾಗಿ ಹುಟ್ಟಿದ್ದರೂ ನನ್ನ ತಂದೆ ತಾಯಿ ನನಗೆ ಬೇರೆ ಧರ್ಮದವರನ್ನು ದ್ವೇಷಿಸುವಂತೆ ಹೇಳಿಲ್ಲ. ಆದರೆ ಬಿಜೆಪಿಯವರು ತಾವು ಮಾತ್ರ ಹಿಂದೂಗಳು ಹಿಂದೂ ಧರ್ಮದ ಪ್ರತಿಪಾದಕರು ಎಂದು ಭಾವಿಸಿದ್ದಾರೆ. ಅವರ ಪ್ರಕಾರ ಬಿಜೆಪಿಯಿಂದ ಹೊರಗಿರುವವರು ಆಕಾಶದಿಂದ ನೇರವಾಗಿ ರಸ್ತೆಗೆ ಬಿದ್ದವರು ಎಂದು ತಿಳಿದುಕೊಂಡಿದ್ದಾರೆ ಎಂದು ಮಮತಾ ಬಿಜೆಪಿ ಅಜೆಂಡಾವನ್ನು ಟೀಕಿಸಿದರು.

ದಕ್ಷಿಣ ಗೋವಾದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಬ್ಯಾನರ್ಜಿ, ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೂ ಬಾಂಗ್ಲಾದೇಶ ಮತ್ತು ರಾಜಸ್ಥಾನದ ಹಿಂಸಾಚಾರದ ನಕಲಿ ವೀಡಿಯೊಗಳನ್ನು ಪಶ್ಚಿಮ ಬಂಗಾಳದಲ್ಲಿ ಆದ ಹಿಂಸಾಚಾರವೆಂದು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸುತ್ತಾರೆ ಎಂದು ಮಮತಾ ಬ್ಯಾನರ್ಜಿ ದೂರಿದರು.

Exit mobile version