Site icon PowerTV

ಕಸದಿಂದಾಗಿ ಹೆಣ್ಣು ಕೊಡ್ತಿಲ್ಲ : ರಘುನಾಥ ರಾವ್ ಮಲ್ಕಾಪುರೆ

ಬೆಳಗಾವಿ : ವಿಧಾನ ಪರಿಷತ್​​ ಅಧಿವೇಶನದಲ್ಲಿ ಬೀದರ್​​ ನಗರದಲ್ಲಿನ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಬಿಜೆಪಿ ಸದಸ್ಯ ಮಲ್ಕಾಪೂರೆ ಪ್ರಶ್ನೆ ಮಾಡಿದ್ದು, ಕಸ ವಿಲೇವಾರಿಯನ್ನು ಹೊರವಲಯದಲ್ಲಿ ಮಾಡಲಾಗುತ್ತಿದೆ.

ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಗಬ್ಬು ವಾಸನೆ ಹೊಡೆಯುತ್ತಿದೆ.ಇದರಿಂದ ಜನರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಮತ್ತು ಊರಿನ ಮಕ್ಕಳಿಗೆ, ವಯಸ್ಸಾದವರಿಗೆ ಹೀಗೆ ಪ್ರತಿಯೊಬ್ಬರಿಗೂ ಆರೋಗ್ಯದಲ್ಲಿ ಸಮಸ್ಯೆ ಆಗುತ್ತಿದೆ. ಅಲ್ಲದೆ ಊರಿಗೆ ಯಾರು ಹೆಣ್ಣು ಸಹ ಕೊಡುತ್ತಿಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು.

ಬೆಂಗಳೂರಿನ ಮಾವಳ್ಳಿ ಸಮಸ್ಯೆಯಂತೆ ನಮ್ಮಲ್ಲೂ ಸಮಸ್ಯೆ ಆಗಿದೆ ಎಂದರು. ಈ ಸಂದರ್ಭದಲ್ಲಿ ಮಲ್ಕಾಪೂರೆಗೆ ಸಭಾಪತಿಗಳು ಧ್ವನಿಗೂಡಿಸಿದರು. ನಂತರ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವುದಾಗಿ ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದ್ದಾರೆ.

Exit mobile version