Site icon PowerTV

ನನ್ನ ಜೀವನದಲ್ಲಿ ಇಂತಹ ಚುನಾವಣೆ ನೋಡಿಲ್ಲ : ಕೆಎಸ್ ಈಶ್ವರಪ್ಪ

ಬೆಳಗಾವಿ : ಚಿಂತಕರ ಚಾವಡಿ ಶ್ರೀಮಂತರ ಚಾವಡಿ ಆಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಸುವರ್ಣಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ಎಲ್ಲ ರಾಜಕೀಯ ಪಕ್ಷದವರು ಚಿಂತನೆ ಮಾಡಿ ವಿಧಾನ ಪರಿಷತ್ ಬೇಕೋ ಬೇಡವೋ ಎಂಬ ನಿಟ್ಟಿನಲ್ಲಿ ಚರ್ಚೆ ಮಾಡಬೇಕು ಎಂದು ಅವರು ಹೇಳಿದರು. ರಾಜಕಾರಣ ಬೇಕು ನಿಜ. ಆದರೆ ನನ್ನ ಜೀವನದಲ್ಲಿ ಇಂತಹ ಚುನಾವಣೆ ನೋಡಿಲ್ಲ. ಈ ಬಗ್ಗೆ ಚರ್ಚೆ ಆಗಬೇಕು. ಚುನಾವಣೆ ಆಯೋಗ ಸತ್ತಿದ್ಯೂ ಬದುಕಿದ್ಯೋ ಎಂಬ ಪರಿಸ್ಥಿತಿ ಬಂದಿದೆ ಎಂಬ ಚರ್ಚೆ ನಡೆಯುತ್ತಿದೆ ಎಂದರು.

ಯಾವುದೇ ಚುನಾವಣೆಯೂ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ಒಂದೊಂದು ಚುನಾವಣೆಗೆ ಒಂದೊಂದು ರೂಪ ಇರುತ್ತದೆ. ಪರಿಷತ್ ಚುನಾವಣೆ ಗಮನಿಸಿದಾಗ, ಪ್ರಜಾಪ್ರಭುತ್ವಕ್ಕೆ ಅಪಮಾನದ ರೀತಿಯಲ್ಲಿ ನಡೆದಿದೆ. ಅಭ್ಯರ್ಥಿಗಳು ಪಕ್ಷದ ವಿಚಾರ, ಸಾಧನೆ ಬಗ್ಗೆ ಹೇಳದೆ, ನೀನು ಎಷ್ಟು ದುಡ್ಡು ಕೊಡ್ತಿಯಾ? ನಾನು ಇಷ್ಟು ಕೊಡುತ್ತೇನೆ ಎನ್ನುತ್ತಾರೆ. ಇಷ್ಟು ಕೆಟ್ಟದಾಗಿ ನಡೆದ ಚುನಾವಣೆ ಪ್ರಜಾಪ್ರಭುತ್ವಕ್ಕೆ ಅಪಮಾನ ಎಂದರು.

Exit mobile version