Site icon PowerTV

ವಂಶ ಪಾರಂಪರ್ಯ ಬಿಜೆಪಿಯಲ್ಲಿ ನಡೆಯಲ್ಲ : ಯತ್ನಾಳ್

ಬೆಳಗಾವಿ : ನಾನು ಸಿಎಂ ಆದರೆ ರಾಜ್ಯದ ಇತಿಹಾಸವೇ ಬದಲಾವಣೆ ಆಗುತ್ತೆ ಎಂದು ಶಾಸಕ ಬಸನ ಗೌಡ ಪಾಟೀಲ್​​​ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿಯೂ ಇಲ್ಲ. ಈ ಹಿಂದೆ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಆಗುತ್ತೆ ಅಂತಾ ಹೇಳಿದ್ದೆ. ಹಾಗೂ ವಂಶ ಪಾರಂಪರ್ಯ ಬಿಜೆಪಿಯಲ್ಲಿ ನಡೆಯಲ್ಲ. ಮಕ್ಕಳು, ಮರಿ ಮಕ್ಕಳು ಪಕ್ಷಕ್ಕೆ ಪ್ರವೇಶ ಆದರೆ ಪಾರ್ಟಿ ಏನ್ ಆಗಬೇಕು?

ಕುಟುಂಬದವರೆಲ್ಲಾ ಎಂಎಲ್ಎ, ಎಂಪಿ ಆದರೆ ದೇವೇಗೌಡರ ಫ್ಯಾಮಿಲಿ ಆಗಿಬಿಡುತ್ತೆ ಎಂದು ಅವರು ಜೆಡಿಎಸ್​​ ಪಕ್ಷದ ಬಗ್ಗೆ ಲೇವಡಿ ಮಾಡಿದರು. ಅಲ್ಲದೇ, ರಾಜ್ಯದಲ್ಲಿ ಸಿಎಂ ಬದಲಾವಣೆ ಅನ್ನೋದು ಕಾಂಗ್ರೆಸ್ ಮಾಡಿರೋ ಸುದ್ದಿ. ಬೊಮ್ಮಾಯಿ ಸಿಎಂ ಆಗಿ ಇನ್ನೂ 100 ದಿನ ಆಗಿದೆ ಅಷ್ಟೇ.

ಭ್ರಷ್ಟಾಚಾರವೆಲ್ಲಾ ಎಲ್ಲಾ ಕಡಿಮೆ ಆಗುತ್ತಿದೆ. ಸೂಪರ್ ಸಿಎಂ ಇದ್ದಾಗ ಭ್ರಷ್ಟಾಚಾರ ಇತ್ತು. ಈಗ ಆ ಪ್ರಮಾಣದಲ್ಲಿ ಇಲ್ಲ ಎಂದು ಹೇಳುವ ಮೂಲಕ ಯತ್ನಾಳ್​​ ಮಾಜಿ ಸಿಎಂ ಬಿಎಸ್​ವೈ ಹಾಗೂ ವಿಜಯೇಂದ್ರಗೆ ಟಾಂಗ್​ ನೀಡಿದ್ದಾರೆ.

Exit mobile version