Site icon PowerTV

ಮತ್ತೆ ಓಪನ್ ಆದ ಮಂತ್ರಿಮಾಲ್

ಬೆಂಗಳೂರು: ಬೆಂಗಳೂರಿನ ಅತ್ಯಂತ ಪ್ರತಿಷ್ಟಿತ ಮಂತ್ರಿಮಾಲ್​ ಆಸ್ತಿ ತೆರಿಗೆ ಕಟ್ಟದಿದ್ದುದರಿಂದ ಅದನ್ನು ಪಾಲಿಕೆ ಅಧಿಕಾರಿಗಳು ಬೀಗ ಜಡಿದಿದ್ದು ನಿಮಗೆಲ್ಲ ಗೊತ್ತು. ಸುಮಾರು ಮೂರು ನಾಲ್ಕು ಬಾರಿ ನೋಟಿಸ್ ನೀಡಿ ಅವಕಾಶ ನೀಡಿದರೂ ಮಂತ್ರಿ ಮಾಲ್ ತೆರಿಗೆ ಕಟ್ಟಲು ಕಳ್ಳಾಟವಾಡಿತ್ತು. ಹೀಗಾಗಿ ಅಧಿಕಾರಿಗಳು ಅದನ್ನು ಮುಚ್ಚಿಸಿ ಬೀಗ ಜಡಿದಿದ್ದರು.

ಇದೀಗ ಮಂತ್ರಿಮಾಲ್ ಮತ್ತೆ ಓಪನ್ ಆಗಿದೆ. ಬೆಂಗಳೂರು ಮಹಾನಗರ ಪಾಲಿಕೆಗೆ  4 ಕೋಟಿ ಚೆಕ್ ನೀಡಿದ ಬಳಿಕ ಮಾಲ್ ಓಪನ್ ಮಾಡಲು ಅವಕಾಶ ನೀಡಿದೆ ಪಾಲಿಕೆ. ಮಂತ್ರಿ ಮಾಲ್ ಚೆಕ್ ಅನ್ನು ಪಶ್ಚಿಮ ವಲಯದ ಜಂಟಿ ಆಯುಕ್ತರ ಹೆಸರಿಗೆ ಹಸ್ತಾಂತರ  ಮಾಡಿದೆ. ಹೀಗಾಗಿ  ಬಿಬಿಎಂಪಿ ಅಧಿಕಾರಿಗಳ ಸಮ್ಮುಖದಲ್ಲಿ ಮಾಲನ್ನು ಓಪನ್ ಮಾಡಲಾಗಿದೆ. ಕೋರ್ಟ್​ ಆದೇಶದ ಮೇರೆಗೆ ಮಾಲ್ ಓಪನ್ ಮಾಡಲು ಅವಕಾಶ ನೀಡಲಾಗಿದೆಯೆಂದು ಪಾಲಿಕೆ ತಿಳಿಸಿದೆ.

 

Exit mobile version