Site icon PowerTV

ಡಿವೈಡರ್ ಗುದ್ದಿ ಯುವಕನಿಗೆ ಗಂಭೀರ ಗಾಯ

ಬೆಂಗಳೂರು: ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಯುವಕನೊಬ್ಬ ಅಪಘಾತ ಮಾಡಿಕೊಂಡಿರುವ ಸುದ್ದಿ ವರದಿಯಾಗಿದೆ. ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕೌಸಿಕ್ ಎನ್ನುವ ಯುವ ಕ ಹೆಲ್ಮೆಟ್ ಹಾಕದೇ ಬೈಕ್​ನಲ್ಲಿ ಬರುತ್ತಿದ್ದ.

ಪೊಲೀಸರನ್ನು ದೂರದಲ್ಲಿಯೇ ಗಮನಿಸಿದ ಯುವಕ ಯೂ ಟರ್ನ್​ ತೆಗೆದುಕೊಂಡು ಎಸ್ಕೇಪ್ ಆಗಲು ಯತ್ನಿಸಿದ. ಇಲ್ಲೆ ಆಗಿದ್ದು ಎಡವಟ್ಟು ಗಾಬರಿ, ಧಾವಂತದಲ್ಲಿ ಕೌಸಿಕ್ ಡವೈಡರ್​ಗೆ ಢಿಕ್ಕಿ ಹೊಡೆದಿದ್ದ. ಇದರಿಂದ ಅವನ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಪೊಲೀಸರ ಯಡವಟ್ಟಿನಿಂದ ಅನಾಹುತ ಮಾಡಿಕೊಂಡಿದ್ದಾನೆಂದು ಪೊಷಕರು ಆರೋಪಿಸಿದ್ದಾರೆ. ಯುವಕನನ್ನು ಪೊಲೀಸರು ಅಟ್ಟಾಡಿಸಿಕೊಂಡು ಹೋಗಿದ್ದಾರೆ, ಆಘ ಭಯಗೊಂಡು ವೇಗವಾಗಿ ಹೋಗಿ ಢಿಕ್ಕಿ ಹೊಡೆದಿದ್ದಾನೆ ಎಂದು ಪೊಷಕರು ಆರೋಪಿಸಿದ್ದಾರೆ. ಆದರೆ ಪೊಲೀಸರು ಆತ ತಪಾಸಣೆ ಜಾಗದಿಂದ ದೂರದಲ್ಲೇ ಯೂ ಟರ್ನ್​ ತೆಗೆದುಕೊಂಡು ಅನಾಹುತ ಮಾಡಿಕೊಂಡಿದ್ಧಾನೆ ಎಂದು ಮಾಹಿತಿ ನೀಡಿದ್ದಾರೆ.

Exit mobile version