Site icon PowerTV

ವೈಯಕ್ತಿಕವಾಗಿ ಯಾವುದೇ ರೀತಿಯ ದ್ವೇಷವಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು : ಹೆಚ್​ಡಿ ಕುಮಾರಸ್ವಾಮಿಯು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವಿಟ್ ಮಾಡಿರುವ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ.\

ವೈಯಕ್ತಿಕವಾಗಿ ನಾನು ಯಾರ ಮೇಲು ಟೀಕೆ ಮಾಡುವುದಿಲ್ಲ. ಕೇವಲ ವಿಚಾರ ಆಧಾರಿತ ವಿಷಯವಾಗಿ ಮಾತ್ರ ನಾನು ಟೀಕೆ ಮಾಡುತ್ತೇನೆ. ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗು ಅವರ ಕುಟುಂಬ ಸದಸ್ಯರ ಮೇಲೆ‌ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ದ್ವೇಷವಿಲ್ಲ. ಕೇವಲ ತತ್ವ ಸಿದ್ದಾಂತದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಜೆಡಿಎಸ್​ನವರು ಜಾತ್ಯಾತೀತ ಎಂದು ಹೇಳಿಕೊಳ್ತಾರೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಆ ಬಗ್ಗೆ ಮಾತನಾಡಿದರೆ ಅವರ ಮೇಲೆ ದ್ವೇಷ ಸಾಧಿಸುತ್ತಿದ್ದೇನೆಂದು ಹೇಳುತ್ತಾರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ್ದಾರೆ.

ನನಗೆ SCF( ಸಿದ್ದು ಸೂತ್ರ ಕಾಂಗ್ರೆಸ್ ಫ್ಯಾಮಿಲಿ) ಅಂತಾರೆ ಅವರು. ಆದರೆ ಇಡೀ ರಾಜ್ಯ ದೇಶಕ್ಕೆ ಗೊತ್ತು ಯಾರು ಕುಟುಂಬ ರಾಜಕಾರಣ ಮಾಡ್ತಾರೆ ಅಂತ. ಅದನ್ನ ನಾನು ಹೇಳುವ ಅಗತ್ಯ ಇಲ್ಲ. ಒಂದು ಗಂಟೆಗಳ ಸುದ್ದಿಗೋಷ್ಠಿ ನಡೆಸಿದ ನಾನು ಒಂದೇ ಒಂದು ಮಾತನ್ನ ಜೆಡಿಎಸ್ ಬಗ್ಗೆ ಮಾತನಾಡಿಲ್ಲ.ಕೇವಲ ವಿಚಾರಗಳ ಬಗ್ಗೆ ಸಮಸ್ಯೆ ಬಗ್ಗೆ ಮಾತ್ರ ಮಾತಾಡಿದ್ದೇನೆ. ಅದು ಕೇವಲ ಬಿಜೆಪಿ ಬಗ್ಗೆ ಮಾತ್ರವೇ‌ ಈಗ ಮಾತನಾಡಿರುವುದು. ಇದರಲ್ಲೇ ನಿಮಗೆ ಗೊತ್ತಾಗುತ್ತೆ ನಾನು ಅನಗತ್ಯವಾಗಿ ಜೆಡಿಎಸ್‌ ಬಗ್ಗೆ ಮಾತಾಡಲ್ಲ ಅಂತ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ‌ ನೀಡಿದ್ದಾರೆ.

Exit mobile version