Site icon PowerTV

ನೇಣು ಬಿಗಿದು ಯುವಕ ಸಾವು; ಕೊಲೆ ಶಂಕೆ

ಬೆಂಗಳೂರು: ಪುನರ್ವಸತಿ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಂಗಮ್ಮನಪಾಳ್ಯದಲ್ಲಿ ನಡೆದಿದೆ. ಆಗ್ನೇಹ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ 24 ವರ್ಷದ ಯುವಕನ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೇಣು ಬಿಗಿದು ಸಾವು ಉಂಟಾಗಿರುವುದರಿಂದ ಅಸಹಜ ಸಾವು ದಾಖಲಿಸಿಕೊಂಡಿದ್ದಾರೆ.

ಆದರೆ ಮೃತ ಯುವಕನ ತಂದೆ ಮಾತ್ರ ತಮ್ಮ ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಮಗ ತಾನಾಗಿಯೇ ನೇಣುಬಿಗಿದುಕೊಂಡು ಸತ್ತಿಲ್ಲ, ಅವನ ಕೊಲೆಯಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸುವುದರ ಜೊತೆಗೆ ಪುನರ್ವಸತಿ ಕೇಂದ್ರದವರ ಮೇಲೆಯೇ ಅನುಮಾನಪಟ್ಟಿದ್ದಾರೆ. ಇದನ್ನು ಲಿಖಿತವಾಗಿ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಎಂದು ದೂರು ಸಹ ನೀಡಿದ್ದಾರೆ. ಹೀಗಾಗಿ ಪೊಲೀಸರು ಕೊಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Exit mobile version