Site icon PowerTV

ಜಿನೋಮ್ ಸ್ವಿಕ್ವೇನ್ಸ್ ಟೆಸ್ಟ್ ಲ್ಯಾಬ್ ಹೆಚ್ಚಳ : ಸಿಎಂ ಬೊಮ್ಮಾಯಿ‌

ಇಂದು ಬೆಳಗಾವಿಯಲ್ಲಿ ಸಭೆ ಇದ್ದು ಪಕ್ಷದ ಶಾಸಕರು ಮುಖಂಡರ ಸಭೆ ಕರೆದಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲೋಕೆ ಏನೆಲ್ಲಾ ಸೂಚನೆ ನೀಡಬೇಕು ಅದನ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಹೇಳಿದರು.

ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು,ನಮ್ಮ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವು ನಿಶ್ಚಿತ.ಲಖನ್ ಜಾರಕಿಹೊಳಿ ಮತ್ತು ಕಾಂಗ್ರೆಸ್​ನ ಬಂಡಾಯ ಅಭ್ಯರ್ಥಿಗೂ ನಮಗೂ ಏನು ಸಂಬಂಧವಿಲ್ಲ ಎಂಡು ಹೇಳಿಕೆ ನೀಡಿದ್ದಾರೆ.

ಎಲ್ಲಾ ಕೊರೊನಾ ಕೇಸ್​ಗಳ ಜಿನೋಮ್ ಸ್ವಿಕ್ವೇನ್ಸ್ ಟೆಸ್ಟ್ ಮಾಡ್ತಿದ್ದೇವೆ. ಆ ಲ್ಯಾಬ್​ಗಳನ್ನ ಹೆಚ್ಚಿಗೆ ಮಾಡೋ ಚಿಂತನೆ ಮಾಡಲಾಗುತ್ತಿದೆ. ಅಲ್ಲದೇ ಪರಿಣತರ ಜೊತೆ ಚರ್ಚಿಸಿ ಈಗಾಗಲೇ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಮತ್ತು ಅದಕ್ಕೆ ಏನೆಲ್ಲಾ ತಯಾರಿಬೇಕು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ.ಹಾಗು ಆದಷ್ಟು ಬೇಗ ವರದಿ ಬರುವಂತೆ ಮಾಡಿ ಎಂದು ಹೇಳಲಾಗಿದೆ.

ಸಿಎಂ ಮನೆಯ ಮುಂದೆಯೇ ಕೋವಿಡ್ ನಿಯಮ ಉಲ್ಲಂಘನೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಆದರ್ಶ ನಗರದ ನಿವಾಸದ ಎದುರೇ ಕೋವಿಡ್ ನಿಯಮ ಉಲ್ಲಂಘನೆ ಆಗಿದ್ದು ಕಂಡು ಬಂತು. ಸಿಎಂ ಮನೆಯ ಮುಂದೆಯೇ ಅಹವಾಲು ನೀಡಲು ನೂಕುನುಗ್ಗಲು ಉಂಟಾಗಿತ್ತು. ನಿವಾಸದ ಎದುರು ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಹೀಗಾಗಿ ಸಾಮಾಜಿಕ ಅಂತರ ಮರೆತು ಕೋವಿಡ್ ನಿಯಮ ಉಲ್ಲಂಘಿಸಿ ಸಿಎಂ ಗೆ ಸಾರ್ವಜನಿಕರು ಅಹವಾಲನ್ನು ನೀಡಿದ್ದಾರೆ.

Exit mobile version