Site icon PowerTV

ರೌಡಿಶೀಟರ್​ಗೆ ಚಾಕು!

ಬೆಂಗಳೂರು:  ಮಚ್ಚು ಲಾಂಗು ಚಾಕು ಸಂಸ್ಕೃತಿ ಇತ್ತೀಚೆಗೆ ಎಲ್ಲೆಂದರಲ್ಲಿ ಕಾಣಸಿಗುತ್ತಿದೆ. ಮೊನ್ನೆ ತಾನೆ ಹಳ್ಳಿಯಲ್ಲಿ ಒಬ್ಬ ಲಾಂಗು ಬೀಸಿ ನಾಲ್ಕಾರು ಹೆಣಗಳನ್ನು ಉರುಳಿಸಿದ್ದು ಮರೆಯುವ ಮುನ್ನವೇ ಇದೀಗ ಶಿವಾಜಿನಗರದಲ್ಲಿ ರೌಡಿಶೀಟರ್ ಒಬ್ಬನಿಗೆ ಅವನ ಹೆಂಡತಿಯ ಎದುರಿಗೆ ಸಿನಿಮೀಯ ರೀತಿಯಲ್ಲಿ ಚಾಕು ಹಾಕಿರುವ ಸುದ್ದಿ ಹೊರಬಿದ್ದಿದೆ. ಆರೋಪಿಗಳು ಆರು ತಿಂಗಳ ಹಿಂದೆ ನಡೆದಿದ್ದ ಕಿರಿಕ್​ಅನ್ನು ಮನಸ್ಸಿನಲ್ಲಿರಿಸಿಕೊಂಡು ಆ ದ್ವೇಶಕ್ಕೆ ಚಾಕು ಹಾಕಿದ್ದಾರೆ ಎನ್ನಲಾಗಿದೆ.

ಹೀಗೆ ಚಾಕು ಹಾಕಿಸಿಕೊಂಡ ವ್ಯಕ್ತಿಯ ಹೆಸರು ಮನ್ಸೂರ್ ಅಲಿಯಾಸ್ ದೂನ್. ಈತ ಶಿವಾಜಿನಗರದ ರೌಡಿಶೀಟರ್. ಈತನಿಗೆ ಚಾಕು  ಹಾಕಿದ ಆರೋಪದಲ್ಲಿ ಆರು ಜನರನ್ನು ಅರೆಸ್ಟ್ ಮಾಡಲಾಗಿದೆ. ಸೈಯಿದ್ ಮೊಯಿನುದ್ದೀನ್, ಅರ್ಬಾಜ್, ಅದ್ನಾನ್ , ಅರ್ಫಾತ್ ಹಾಗು ಒರ್ವ ಕಾನೂನು ಸಂಘರ್ಷಕ್ಕೆ ಒಳಗಾದ  ಬಾಲಕ ಅರೆಸ್ಟ್ ಆಗಿದ್ದಾರೆ.

ಹಿಂದೊಮ್ಮೆ ರಂಜಾನ್ ಸಮಯದಲ್ಲಿ ಆರೋಪಿಗಳು ಶಿವಾಜಿನಗರದಲ್ಲಿ ಬೈಕ್​ನಲ್ಲಿ ಸುತ್ತುವಾಗ ದೂನ್​ಗೆ ಚಮಕ್ ಕೊಟ್ಟಿದ್ದರು. ಆಗ ದೂನ್ ಮೊಯಿನುದ್ದೀನ್ ಸೇರಿ ಮೂವರಿಗೆ ಹೊಡೆದಿದ್ದ. ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿಗಳು ಸಮಯ ಸಾಧಿಸಿ ದೂನ್ ಬೈಕ್ ಸರ್ವೀಸ್ ಮಾಡಿಸಿಕೊಂಡು ಹೋಗುವಾಗ ಅಟ್ಯಾಕ್ ಮಾಡಿದ್ದಾರೆ. ತಮ್ಮ ಬೈಕ್​ನಿಂದ ದೂನ್​ ಬೈಕ್ ಬೀಳಿಸಿ ಅವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಪುಲಿಕೇಶಿನಗರದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

 

Exit mobile version